Breaking News

ʼಲಾಕ್‌ ಡೌನ್ʼ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವ ಜನ

Spread the love

ರಾಜ್ಯದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್​ ಕಾಟ ಮಿತಿಮೀರಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಹೇರಿದ್ದು ರಾಜ್ಯ ರಾಜಧಾನಿಯ ಬಹುತೇಕ ಮಂದಿ ಕಳೆದ ವರ್ಷದಂತೆಯೇ ಈ ವರ್ಷವೂ ಸಹ ತವರೂರಿಗೆ ವಾಪಸ್ಸಾಗ್ತಾ ಇದ್ದಾರೆ.

ಕೊರೊನಾ ಬಂದರೆ ವೈದ್ಯಕೀಯ ಸೌಲಭ್ಯ ಸಿಗದೇ ಹೋದರೆ ಎನ್ನುವ ಭಯ, ಲಾಕ್​ಡೌನ್​ನಿಂದಾಗಿ ಹೊಟ್ಟೆಪಾಡು ಹೇಗೆ ಎಂಬ ಆತಂಕ ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಿನ ಬಹುತೇಕ ಮಂದಿ ಊರು ಖಾಲಿ ಮಾಡ್ತಿದ್ದಾರೆ. ಗಂಟು ಮೂಟೆ ಕಟ್ಟಿಕೊಂಡ ಜನರು ಖಾಸಗಿ ವಾಹನಗಳಲ್ಲಿ, ಗೂಡ್ಸ್ ಗಾಡಿಗಳ ಮೂಲಕ ಬೆಳಗ್ಗೆಯಿಂದಲೇ ಬೆಂಗಳೂರಿನಿಂದ ಜಾಗ ಖಾಲಿ ಮಾಡ್ತಿದ್ದಾರೆ.

ಬೆಂಗಳೂರು ತ್ಯಜಿಸಿ ಹೊರಟವರಲ್ಲಿ ಬಹುತೇಕ ಕುಟುಂಬ ಟ್ಯಾಕ್ಸಿ ಸೇವೆ, ಬಾರ್​, ಹೋಟೆಲ್​ ಇವುಗಳನ್ನೇ ನಂಬಿಕೊಂಡಿದೆ. ಇವರೆಲ್ಲರೂ ರಾಜ್ಯ ರಾಜಧಾನಿ ಮತ್ತೆ ಮೊದಲಿನಂತೆಯೇ ಆದ ಬಳಿಕ ವಾಪಸ್ಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ