Breaking News

ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಶಾಕ್ : ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ

Spread the love

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಯುಗಾದಿ ಹಬಕ್ಕೂ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಹೂವು, ಹಣ್ಣು, ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಹೌದು, ಯುಗಾದಿ ಪ್ರಯುಕ್ತ ನಗರದ ಕೆ.ಆರ್. ಮಾರ್ಕೆಟ್, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಗ್ರಾಹಕರು ಹೂ, ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿದ್ರು, ಹಬ್ಬಕ್ಕೆ ತಳಿರು-ತೋರಣ ಸೇರಿದಂತೆ ಬೇವು ಬೆಲ್ಲ ಖರೀದಿಸಿದ್ದಾರೆ. ಈ ಬಾರಿ ಹೂವು, ಹಣ್ಣಿನ ಬೆಲೆ ಭಾರೀ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಕನಕಾಂಬರ ಹೂವು ಕೆಜಿಗೆ 250 ರೂ. ಇದ್ದರೆ, ಚಂಡೂ ಹೂವು 200 ರೂ. ಮಲ್ಲಿಗೆ ಹೂವು 100 ರೂ. ಗಡಿ ದಾಟಿದೆ. ಸೇವಂತಿಗೆ 250 ರೂ. ಮಲ್ಲಿಗೆ ಹೂವು 300 ರೂ.ನಿಂದ 500 ರೂ.ವರೆಗೆ ಮಾರಾಟವಾಗಿದೆ. ಇನ್ನು ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ದ್ರಾಕ್ಷಿಹಣ್ಣು ಕೆಜಿಗೆ 80 ರೂ. ನಿಂದ 100 ರೂ. ಕಿತ್ತಳೆಹಣ್ಣು ನಾಲ್ಕಕ್ಕೆ 100 ರೂ. ಸಪೋಟ ಕೆಜಿಗೆ 60 ರಿಮದ 80 ರೂ. ಕಲ್ಲಂಗಡಿ ಕೆಜಿಗೆ 40 ರೂ. ಬಾಳೆ ಹಣ್ಣು ಡಜನ್ ಗೆ 50 ರೂ.ನಿಂದ 100 ರೂ.ವರೆಗೆ ಮಾರಾಟವಾಗಿದೆ.


Spread the love

About Laxminews 24x7

Check Also

ತಿರಂಗ ಯಾತ್ರೆಯಲ್ಲಿ ಗಮನ ಸೆಳೆದ ಈಸೂರು ದಂಗೆಯ ಸ್ತಬ್ಧಚಿತ್ರ

Spread the loveಶಿವಮೊಗ್ಗ: ನಗರದ  ಶೀನಪ್ಪಶೆಟ್ಟಿ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ  ಅಂಗವಾಗಿ ಬಿಜೆಪಿ ವತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ತಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ