Breaking News

ಬಸವಕಲ್ಯಾಣದಲ್ಲಿ ಸಿಎಂ ಕಾರಿಗೆ ಕಾರ್ಯಕರ್ತರಿಂದ ಮುತ್ತಿಗೆಗೆ ಯತ್ನ

Spread the love

ಬೀದರ್ : ಉಪ ಚುನಾವಣೆ ಪ್ರಚಾರ ಹಿನ್ನೆಲೆ ಬಸವಕಲ್ಯಾಣ ನಗರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರ ಕಾರನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹಾಗೂ ಕಾರ್ಯಕರ್ತರು ತಡೆದು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಮುತ್ತಿಗೆ ತಡೆಯಲು ಪೊಲೀಸರು ಹರಸಾಹಸ ಪಟ್ಟರು.

ನಗರಕ್ಕೆ ಸಿ.ಎಂ ಆಗಮಿಸುತ್ತಿದಂತೆ ಮಲ್ಲಿಕಾರ್ಜುನ ಖೂಬಾ ನಿವಾಸದ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು ಸಿ‌ಎಂ ಸಂಚರಿಸುತ್ತಿದ್ದ ವಾಹನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಸಿ.ಎಂ ಯಡಿಯೂರಪ್ಪ ನವರೇ ನಮಗೆ ನ್ಯಾಯ ಕೊಡಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಡಾಯ ಅಭ್ಯರ್ಥಿ ಖೂಬಾ ಮನೆಯ ಮುಂದೆ ಭಾರಿ ಪೊಲೀಸ ಬಂದೋ ಬಸ್ತ್ ಮಾಡಲಾಗಿತ್ತು.


Spread the love

About Laxminews 24x7

Check Also

ಬೀದರ್‌ನಲ್ಲಿ ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು

Spread the loveಬೀದರ್: ಕೃಷಿ ಚಟುವಟಿಕೆಗಾಗಿ ಜಮೀನಿಗೆ ಹೋಗಿದ್ದಾಗ ಸಿಡಿಲು  ಬಡಿದು ಯುವರೈತ  ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ