Breaking News

ಜೈನ ಸಂತರಿಗೂ ಉಚಿತ ಕೋವಿಡ್‌ ಲಸಿಕೆ?

Spread the love

ದಾವಣಗೆರೆ: ಲೋಕ ಸಂಚಾರ ಮಾಡುತ್ತಿರುವ ಜೈನ ಸಾಧು- ಸಾಧ್ವಿಯರಿಗೆ ಯಾವುದೇ ದಾಖಲೆ ಕಡ್ಡಾಯಗೊಳಿಸದೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲು ಅನುಮತಿ ಕೋರಿ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಲೋಕ ವಿಹಾರಿಗಳಾದ ಜೈನ ಸಾಧು-ಸಾಧ್ವಿಯರಿಗೆ ಕೋವಿಡ್ ಲಸಿಕೆ ನೀಡುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್‌ ಜೈನ್‌ ಅವರು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆರೋಗ್ಯ ಸಚಿವರು, ಈ ಕುರಿತು ಕ್ರಮ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಸೂಚಿಸಿದ್ದರು.

ವ್ಯಕ್ತಿ ಗುರುತಿನ ಯಾವುದೇ ದಾಖಲೆಗಳಿಲ್ಲದೆ ಲಸಿಕೆ ನೀಡಲು ಕೇಂದ್ರ ಸರಕಾರದ ಒಪ್ಪಿಗೆ ಬೇಕಿರುವುದರಿಂದ ರಾಜ್ಯ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಅನುಮತಿ ಕೋರಿ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆದಿ ದ್ದಾರೆ. ಕೇಂದ್ರ ಸರಕಾರ ಪೂರಕವಾಗಿ ಸ್ಪಂದಿಸಿದರೆ ದೇಶಾದ್ಯಂತ 50,000ಕ್ಕೂ ಅಧಿಕ ಜೈನ ಸಾಧು- ಸಾಧ್ವಿಯರಿಗೆ ಅನುಕೂಲ ವಾಗಲಿದೆ. ಈ ಸಂಖ್ಯೆ ರಾಜ್ಯದಲ್ಲಿ 2,000ರಷ್ಟಿದೆ.

ಗುರುತಿನ ಚೀಟಿಯಿಲ್ಲದ ಲೋಕ ಸಂಚಾರಿ ಜೈನ ಸಾಧು-ಸಾಧ್ವಿಯರಿಗೆ ಕೋವಿಡ್‌ ಲಸಿಕೆ ನೀಡುವಂತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಗುವ ವಿಶ್ವಾಸವಿದೆ. – ಗೌತಮ್‌ ಜೈನ್‌, ನಿರ್ದೇಶಕರು, ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮ


Spread the love

About Laxminews 24x7

Check Also

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

Spread the loveಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ