Breaking News

ತಮ್ಮ ವಿರುದ್ದ ‘ಸಿಡಿ ಲೇಡಿ’ ಪೋಲಿಸ್ರಿಗೆ ದೂರು ನೀಡಿದ ಬಳಿಕ ರಮೇಶ್ ಜಾರಕಿ ಹೇಳಿದ್ದೇನು ಗೊತ್ತಾ?

Spread the love

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರವಾಗಿ ವಕೀಲ ಜಗದೀಶ್​ ಎನ್ನುವವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ನಡುವೆ ಇಂದು ಬೆಳಗ್ಗೆ ಮೂರನೇ ವಿಡಿಯೋವನ್ನು ಯುವತಿ ಬಿಡುಗಡೆ ಮಾಡಿದ್ದಳು ಈ ವೇಳೆ ಆಕೆ ನಾನು 24 ದಿನದಿಂದ ನನಗೆ ಜೀವ ಬೆದರಿಕೆ ಇತ್ತು. ಈವಾಗ ನನಗೆ ಧೈರ್ಯ ಬಂದಿದೆ. ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಹೇಳಿದ್ದಾಳೆ. ಎಲ್ಲ ಪಕ್ಷದ ನಾಯಕರು, ರಾಜ್ಯದ ಜನರು ನನಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ವಕೀಲ ಜಗದೀಶ್ ಅವರ ಮೂಲಕ ಇಂದು ರಮೇಶ್ ಜಾರಕಿಹೊಳಿ ದೂರು ನೀಡುತ್ತೇನೆ ಎಂದು ಹೇಳಿದ್ದಳು.

ಅದರಂತೆ ಇಂದು ಸಂತ್ರಸ್ಥೆ ಪರ ವಕೀಲರು ಬೆಂಗಳೂರು ಪೊಲೀಸ್‌ ಪೋಲಿಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ನಡುವೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಪೊಲೀಸರು ರಮೇಶ್‌ ರಮೇಶ್ ಜಾರಕಿಹೊಳಿ ವಿರುದ್ದ FIR ದಾಖಲು ಮಾಡಲಾಗಿದೆ ಎನ್ನಲಾಗಿದೆ. ಈ ನಡುವೆ ತಮ್ಮ ವಿರುದ್ದ ಯುವತಿ ದೂರು ನೀಡುತ್ತಿದ್ದ ಹಾಗೇ ಮಾಧ್ಯಮಗಳ ಜೊತೆಗೆ ಮಾತನಾಡಿರುವ ರಮೇಶ್‌ ಜಾರಕಿಹೊಳಿ ನಾಳೆಯಿಂದ ನಮ್ಮ ಆಟ ಶುರುವಾಗಲಿದೆ, ನೋಡಿ ಅಂತ ಹೇಳಿದ್ರು, ಇನ್ನೂ ಸರ್ಕಾರವನ್ನೇ ಉರುಳಿಸಿರುವ ನಮಗೆ ಇದ್ಯಾವ ಲೆಕ್ಕೆ ಅಂತ ಹೇಳಿದ್ದಾರೆ. ಕೊನೆಯ ಅಸ್ತ್ರವನ್ನ ಆಕೆ ಪ್ರಯೋಗ ಮಾಡಿದ್ದು, ನಾನು ಯಾವುದೇ ಕಾರಣಕ್ಕೂ ಹೆದರುವುದುಇಲ್ಲ, ಇದ್ಯಾವ ಲೆಕ್ಕ ಅಂತ ಹೇಳಿದ್ರು. ಮೊದಲು ನಾನು ನೀಡಿರುವ ದೂರಿನ ಬಗ್ಗೆ ತನಿಖೆಯಾಗಲಿ, ಮೊದಲು ನನ್ನ ದೂರಿಗೆ ಸಂಬಂಧಪಟ್ಟಂತೆ ಎಫ್‌ಐಆರ ದಾಖಲಾಗಬೇಕು, ಈ ಬಗ್ಗೆ ನಾನು ಗೃಹ ಸಚಿವರ ಬಳಿಯೂ ಕೂಡ ಮಾತನಾಡಿರುವೆ ಅಂತ ಆಕೆ ಹೇಳಿದ್ದಾಳೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ