Breaking News

ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನಕ್ಕೆ ಆರೋಪಿಗಳು ಪ್ಲಾನ್ ಮಾಡಿದ್ದರೆಂಬ ವಿಷಯ ಇದೀಗ ಬಹಿರಂಗವಾಗಿದೆ.

Spread the love

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸುದ್ದಿಗಳು ಹೊರಬರುತ್ತಲೇ ಇದೆ. ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನಕ್ಕೆ ಆರೋಪಿಗಳು ಪ್ಲಾನ್ ಮಾಡಿದ್ದರೆಂಬ ವಿಷಯ ಇದೀಗ ಬಹಿರಂಗವಾಗಿದೆ.

ಸಿಡಿ ಪ್ರಕರಣದ ಕಿಂಗ್ ಪಿನ್ ಪತ್ರಕರ್ತ, ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನ ನಡೆಸಲು ಯೋಜನೆ ರೂಪಿಸಿದ್ದ. ಡೀಲ್ ದುಡ್ಡಲ್ಲಿ ಜಾತ್ರೆ ನಡೆಸಲು ಕೂಡ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

 

ಮಹಿಂದ್ರಾ ಕಂಪನಿಯ ಎರಡು ಕಾರ್ ಖರೀದಿಸಲು ಮುಂದಾಗಿದ್ದ ಆತ ಮಹೀಂದ್ರಾ XUV ಹಾಗೂ ಥಾರ್ ಜೀಪ್ ಖರೀದಿ ಮಾಡಲು ನಿರ್ಧರಿಸಿದ್ದ. ಅದಕ್ಕಾಗಿ ಕಾರು ಬುಕ್ ಕೂಡ ಮಾಡಿದ್ದ. ಅಲ್ಲದೇ ಕೊಡಗು ಹಾಗೂ ಮೈಸೂರು ಭಾಗದಲ್ಲಿ ಕಾಫಿ ತೋಟ, ಜಮೀನು ಖರೀದಿ ಮಾಡಲು ಪರಿಶೀಲನೆ ನಡೆಸಿದ್ದ. ಈ ಬಗ್ಗೆ ತನ್ನ ಸ್ನೇಹಿತರಿಗೂ ಕರೆ ಮಾಡಿ ಜಮೀನು, ಕಾಫಿ ತೋಟದ ಬಗ್ಗೆ ವಿಚಾರಿಸಿದ್ದ. ಸಿಡಿ ಪ್ರಕರಣ ಗಂಭೀರವಾಗುತ್ತಿದ್ದಂತೆಯೇ ಕಾರು ಖರೀದಿ ಪ್ಲಾನ್ ನಿಂದ ಹಿಂದೆ ಸರಿದಿದ್ದ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ