Breaking News

ನಡು ರಸ್ತೆಯಲ್ಲೇ ಹೈಕೋರ್ಟ್ ವಕೀಲ ದಂಪತಿ ಭೀಕರ ಹತ್ಯೆ..!ಬೆಚ್ಚಿಬಿದ್ದ ತೆಲಂಗಾಣ..!ವಿಡಿಯೋ

Spread the love

ತೆಲಂಗಾಣ : ಹೈಕೋರ್ಟ್​​ನಲ್ಲಿ ಅಭ್ಯಾಸ ಮಾಡುತ್ತಿದ್ದ ಪ್ರಸಿದ್ಧ ವಕೀಲ ದಂಪತಿಯನ್ನು ಮಧ್ಯಾಹ್ನ ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ತೆಲಂಗಾಣ ಬೆಚ್ಚಿಬಿದ್ದಿದೆ. ದಂಪತಿ ಗಟ್ಟು ವಾಮನ್​ ರಾವ್​ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ನ್ಯಾಯಾಲಯಕ್ಕೆ ಹಾಜರಾಗಿ ಹಿಂದಿರುಗುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಸ್ಥಳೀಯರ ಮೊಬೈಲ್​​ನಲ್ಲಿ ದೃಶ್ಯಾವಳಿ ಸೆರೆಯಾಗಿವೆ. ದಾಳಿಕೋರನೋರ್ವ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಹಲ್ಲೆಕೋರ ನಡು ರಸ್ತೆಯಲ್ಲಿ ವಕೀಲ ದಂಪತಿ ಮೆಲೆ ಚಾಕುವಿನಿಂದ ಇರಿದಿದ್ದು, ಈತ ವೃತ್ತಿಪರ ಕೊಲೆಗಾರನೆಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಈಗಾಗಲೇ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆತನ 10 ಮಂದಿ ಸಹಚರರನ್ನ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದು, ಆರು ತಂಡ ರಚನೆ ಮಾಡಿದ್ದಾಗಿ ಹೇಳಿದ್ದಾರೆ.ಇದಕ್ಕೂ ಮೊದಲು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಈ ದಂಪತಿ ತೆಲಂಗಾಣ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಿಗೆ ಔಪಚಾರಿಕ ದೂರು ನೀಡಿದ್ದರು. ತೆಲಂಗಾಣ ಬಾರ್ ಅಸೋಸಿಯೇಷನ್ ಹಾಗೂ ಇತರ ಸಂಸ್ಥೆಗಳು ಈ ದಾಳಿಯನ್ನು ಖಂಡಿಸಿವೆ.

 


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ