Breaking News

ನಿಯತಿ ಫೌಂಡೇಶನ್ ವತಿಯಿಂದ ಅಮಟೆಗೆ ಸನ್ಮಾನ

Spread the love

ಬೆಳಗಾವಿ – ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ, ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಂಗಳವಾರ ಬೆಳಗಾವಿ ಡಿಸಿಪಿ ಡಾ. ವಿಕ್ರಂ ಅಮಟೆ ಅವರನ್ನು ಭೇಟಿ ಮಾಡಿ, ಪ್ರಾಣಿ ಕಲ್ಯಾಣ ಮಂಡಳಿ ಕೆಲಸದಲ್ಲಿ ಪೊಲೀಸರ ಸಹಕಾರದ ಕುರಿತು ಚರ್ಚಿಸಿದರು.

ವಿಕ್ರಂ ಅಮಟೆ ಪಶು ವೈದ್ಯರಾಗಿದ್ದು, ಪ್ರಾಣಿಗಳ ರಕ್ಷಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಬ್ಬರೂ ಚರ್ಚಿಸಿದರು. ಈ ಸಂಬಂಧ ರಚಿಸಬೇಕಾದ ಎಸ್ ಪಿಸಿಎ ಸಮಿತಿ ಕುರಿತು ಸಹ ಚರ್ಚಿಸಲಾಯಿತು.

ಪ್ರಾಣಿ ಕಲ್ಯಾಣ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅಮಟೆ ಭರವಸೆ ನೀಡಿದರು.  ಮುಖ್ಯಮಂತ್ರಿಗಳ ಪದಕ ಪಡೆದಿರುವುದಕ್ಕಾಗಿ ಮತ್ತು ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಗಮನ ನೀಡುತ್ತಿರುವುದಕ್ಕಾಗಿ ನಿಯತಿ ಫೌಂಡೇಶನ್ ವತಿಯಿಂದ ಅಮಟೆ ಅವರನ್ನು ಸೋನಾಲಿ ಸರ್ನೋಬತ್ ಸನ್ಮಾನಿಸಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ