Breaking News

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ

Spread the love

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯು ಪ್ರತೀ ಲೀಟರ್ ಗೆ 35 ಪೈಸೆಯಷ್ಟು ಹೆಚ್ಚಾಗಿದ್ದು, ದಾಖಲೆ ಏರಿಕೆ ಕಂಡಿದೆ.

ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯು 87.30, ಮುಂಬಯಿಯಲ್ಲಿ 93.83 ರೂ. ಆಗಿದೆ. ದೆಹಲಿಯಲ್ಲಿ ಡೀಸೆಲ್ ಪ್ರತೀ ಲೀಟರ್ ಗೆ 77.48 ರೂ. ಮತ್ತು ಮುಂಬಯಿಯಲ್ಲಿ 84.36 ರೂ. ಆಗಿದೆ.

ಸೋಮವಾರ ಕಚ್ಚಾ ತೈಲವು ಪ್ರತೀ ಬ್ಯಾರಲ್ ಗೆ 60 ಡಾಲರ್ ಆಗಿದ್ದು, ಇದು ಈ ವರ್ಷದ ಗರಿಷ್ಠ ಬೆಲೆಯಾಗಿದ್ದು, ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಕೆಯಾಗುತ್ತಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಡಿತವಾಗಬೇಕಿದ್ದರೆ, ಸರ್ಕಾರವು ತೆರಿಗೆ ಕಡಿಮೆ ಮಾಡಬೇಕು ಎಂದು ತೈಲ ಕಂಪೆನಿಗಳು ಹೇಳಿವೆ.


Spread the love

About Laxminews 24x7

Check Also

ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ

Spread the loveಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ