Breaking News

ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

Spread the love

ತಿರುಪತಿ: ಆಂಧ್ರದ ಮದನಪಲ್ಲಿಯಲ್ಲಿ ಜನವರಿ 24ರಂದು ಹೆತ್ತವರೇ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಬೆಚ್ಚಿಬೀಳುವ ವಿಚಾರಗಳು ಬೆಳಕಿಗೆ ಬರುತ್ತಿವೆ. ತನ್ನನ್ನು ತಾಯಿ ಕಾಳಿಯ ಅಪರಾವತಾರ ಎಂದು ಭಾವಿಸಿಕೊಂಡ ನನ್ನ ಪತ್ನಿ ಪದ್ಮಜ, ದೊಡ್ಡ ಮಗಳು ಅಲೇಖ್ಯಾಳನ್ನು ಕೊಂದ ನಂತರ, ನಾಲಗೆಯನ್ನು ಕಟ್ ಮಾಡಿಕೊಂಡು ತಿಂದುಬಿಟ್ಟಳು’ ಎಂದು ಪುರುಷೋತ್ತಮ ನಾಯ್ಡು ಕಣ್ಣೀರಿಡುತ್ತಾ ವೈದ್ಯರ ಮುಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ವಿಚಾರದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ಪೂರ್ವಜನ್ಮದಲ್ಲಿ ನಂಬಿಕೆ ಇರಿಸಿದ್ದ ಅಲೇಖ್ಯಾ, ಅಪ್ಪ ನೀನು ಮಹಾಭಾರತ ನಡೆದಾಗ ಅರ್ಜುನನಾಗಿ ಜನಿಸಿದ್ದೆ. ಕಾಲೇಜಿಗೆ ಹೋಗಿ ಪಾಠ ಮಾಡುವುದು ನಿನ್ನ ವೃತ್ತಿ ಅಲ್ಲ.

ಪಾಂಡವರ ಪರವಾಗಿ ಮುಂದೆ ನಿಂತು ನಡೆಸಿದ ಹೋರಾಟ ಸ್ಫೂರ್ತಿಯನ್ನು ಈಗಲೂ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಿದ್ದಳು ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿಕೊಂಡಿದ್ದಾರೆ.
ಕಲಿಯುಗ ಅಂತ್ಯವಾಗಿ ಸತ್ಯ ಯುಗ ಆರಂಭವಾಗಲಿದೆ.

ಕೊರೊನಾ ಕೂಡ ಇದರ ಸೂಚಕ ಎಂದು ಮಗಳು ಅಲೇಖ್ಯಾ ಹೇಳುತ್ತಿದ್ದಳು. “ನನ್ನ ಮಗಳ ಮಾತುಗಳೆಲ್ಲಾ ಸತ್ಯ ನಾನು ಓದಿದ ಆಧ್ಯಾತ್ಮಿಕ ಪುಸ್ತಗಳಲ್ಲಿಯೂ ಈ ವಿಷಯಗಳೇ ಇವೆ” ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ