Breaking News

ಡಿಕೆ ಶಿವಕುಮಾರಗೆ ಧಮ್ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಕೆಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.

Spread the love

ಧಾರವಾಡ: ದೇಶ-ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಇಂಥ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಆದರೆ, ರಾಜ್ಯದಲ್ಲಿ ಇನ್ಮುಂದೆ ಕಾಂಗ್ರೆಸ್ ಮುಖ್ಯಮಂತ್ರಿ ಅಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯ ಮಾಡಿದರು.

ಇಲ್ಲಿಯ ಜಿಲ್ಲಾ ಪಂಚಾಯತಿ ನೂತನ ಆಡಳಿತ ಭವನಕ್ಕೆ ಲೋಕಾರ್ಪಣೆಗೊಳಿಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ‌ ನೀಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಕರ್ನಾಟಕದ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಇನ್ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದ ಸಚಿವ ಈಶ್ವರಪ್ಪ, ಮಾತು ಮಾತಿಗೂ ಧಮ್ ಪದ ಬಳಸುವ ಡಿ.ಕೆ. ಶಿವಕುಮಾರಗೆ ಅದೇ ಧಮ್ ಇದ್ದರೆ ಮುಂದಿನ ಸಿಎಂ ನಾನೇ ಎಂಬ ಹೇಳಿಕೆ ಕೊಡುವ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲ್ ಹಾಕಿದರು.

ಮುಖ್ಯಮಂತ್ರಿ ಯಾರೆಂದು ಹೈಕಮಾಂಡ್, ಪಕ್ಷದ ಶಾಸಕರು ನಿರ್ಧರಿಸುವುದು ಬೇಡವೇ…? ಡಿ.ಕೆ.ಶಿವಕುಮಾರಗೆ ಧಮ್ ಇದ್ದರೆ, ನಾನೇ ಮುಂದಿನ ಸಿಎಂ ಸೇರಿದಂತೆ ಬಾಯಿಗೆ ಬಂದಂತೆ ಹೇಳುವ ಸಿದ್ದರಾಮಯ್ಯರ ಸರ್ವಾಧಿಕಾರಿ ದೋರಣೆ ವಿರುದ್ಧ ಕ್ರಮ‌ಕೈಗೊಂಡು, ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಿ ಎಂದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

Spread the loveಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ