Breaking News

ಧಾರವಾಡದವರೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಾದಿಯನ್ನು ಬದಲಾವಣೆ ಮಾಡಬೇಕೆಂದು ಗ್ರಾಮಸ್ಥರ ಮನವಿ

Spread the love

ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಗೆ ಗ್ರಾಮಸ್ಥರ ಮನವಿ
ಬೆಳಗಾವಿ: ದೇಸೂರು ಇದ್ದಲಹೊಂಡ ಗ್ರಾಮದಿಂದ ಧಾರವಾಡದವರೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಾದಿಯನ್ನು ಬದಲಾವಣೆ ಮಾಡಬೇಕೆಂದು ನಂದಿಹಳ್ಳಿ, ಗರ್ಲಗಂಜಿ ಹಾಗೂ ನಾಗೇನಹಳ್ಳಿ ಗ್ರಾಮಸ್ಥರು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

 ರೈಲ್ವೇ ಇಲಾಖೆಯ ಸರ್ವೇ ಕಾರ್ಯದ ಪ್ರಕಾರ ಧಾರವಾಡಕ್ಕೆ ನಂದಿಹಳ್ಳಿ, ಗರ್ಲಗಂಜಿ ಹಾಗೂ ನಾಗೇನಹಳ್ಳಿ ಮುಖಾಂತರ ರೈಲ್ವೆ ಹಾದಿ ಹಾದು ಹೋಗುತ್ತಿದೆ. ಇದ್ದರಿಂದ ನಮ್ಮ ಫಲವತ್ತಾದ ಜಮೀನುಗಳು ನಾಶವಾಗುತ್ತವೆ. ಈ ಕುರಿತು ರೈಲ್ವೆ ಹಾದಿಯನ್ನು ಬದಲಾವಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಎಲ್ಲಾ ಗ್ರಾಮಸ್ಥರು ಸೇರಿ ಇದಕ್ಕೆ ಪರ್ಯಾಯ ನಕ್ಷೆಯನ್ನು ನೀಡಿದ್ದು, ಇದರಿಂದ ಸರ್ಕಾರಕ್ಕೂ ಖರ್ಚು ಕಡಿಮೆಯಾಗಲಿದೆ ಎಂದು ಅವರು ಮನವಿ ಪತ್ರದಲ್ಲಿ ರಾಜ್ಯ ಸಭಾ ಸದಸ್ಯ ಈರಾಣ್ಣಾ ಕಡಾಡಿ ಅವರಿಗೆ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ