ಪಂಜಾಬ್, ನ .17- ಕೊರೊನಾ ಸಂಕಷ್ಟದ ವೇಳೆ ವಲಸಿಗರಿಗೆ ನೆರವು ನೀಡುವ ಮೂಲಕ ವಲಸಿಗರ ಪಾಲಿನ ದೇವರಾಗಿದ್ದ ಸೋನುಸೂದ್‍ರವರು ಈಗ ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬಾಲಿವುಡ್ ನಟ ಸೋನುಸೂದ್ ಅವರೇ ಸೂಕ್ತ ಎಂದು ಮನಗಂಡಿರುವ ಚುನಾವಣಾ ಆಯೋಗ ಅವರನ್ನೇ ಚುನಾವಣಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಚುನಾವಣಾ ವೇಳೆ ಅಪರಾಧಗಳನ್ನು ತಡೆಯಲು, ಸ್ವಚ್ಛ, ನ್ಯಾಯಯುತ ಚುನಾವಣೆ ನಡೆಸುವಂತೆ ಉತ್ತೇಜಿಸುವುದು, ಮತದಾನದ ಬಗ್ಗೆ ಮಹತ್ವದ ಅರಿವು ಮೂಡಿಸುವ ಸಲುವಾಗಿ ಪ್ರಕಟಗೊಳ್ಳುವ ಜಾಹೀರಾತಿನ ರಾಯಭಾರಿಯನ್ನಾಗಿ ಸೋನು ಸೂದ್ ಅವರನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ.
Laxmi News 24×7