Breaking News

ಸುಧಾ ಆಪ್ತೆ ರೇಣುಕಾ ಮನೆಯಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ,ಚಿನ್ನಾಭರಣ ಪತ್ತೆ..!

Spread the love

ಬೆಂಗಳೂರು, ನ.8- ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಅವರ ಆಪ್ತರ ನಿವಾಸಗಳಲ್ಲೂ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.

ನಿವೃತ್ತ ಡಿವೈಎಸ್‍ಪಿ ಚಂದ್ರಶೇಖರ್ ಅವರ ಪತ್ನಿ ರೇಣುಕಾ ಅವರು ಸುಧಾ ಅವರ ಆಪ್ತರಾಗಿದ್ದು, ಇವರ ನಿವಾಸದ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಒಟ್ಟು 3.5 ಕೆಜಿ ಚಿನ್ನ, 7 ಕೆಜಿ ಬೆಳ್ಳಿ ವಸ್ತುಗಳು, ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ಯಾಟರಾಯನಪುರದಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ರೇಣುಕಾ ಅವರು ವಾಸಿಸುತ್ತಿದ್ದು, ಎಸಿಬಿ ಅಕಾರಿಗಳು ದಾಳಿ ನಡೆಸಿದಾಗ ಇಷ್ಟೊಂದು ಪ್ರಮಾಣದ ನಗ-ನಾಣ್ಯ ಸಿಕ್ಕಿದೆ ಎಂದು ಹೇಳಲಾಗಿದೆ.

ರೇಣುಕಾ ಅವರು ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ನಾಲ್ಕು ಕಂಪೆನಿಗಳನ್ನು ನಡೆಸುತ್ತಿದ್ದರು. ಇವರಿಗೆ ಸುಧಾ ಅವರ ಸಂಪರ್ಕವೂ ಇತ್ತು ಎಂದು ಹೇಳಲಾಗುತ್ತಿದೆ.

ಇವರ ಮನೆಯಲ್ಲಿ ಪತ್ತೆಯಾಗಿರುವ ಚಿನ್ನ, ಆಸ್ತಿ ಪತ್ರಗಳ ಜತೆಗೆ ಸುಮಾರು 36 ಲಕ್ಷಕ್ಕೂ ಹೆಚ್ಚು ನಗದು, 100ಕ್ಕೂ ಹೆಚ್ಚು ಚೆಕ್‍ಗಳು, ಅಗ್ರಿಮೆಂಟ್ ಪೇಪರ್‍ಗಳು, 40 ಬ್ಯಾಂಕ್ ಪಾಸ್‍ಬುಕ್‍ಗಳು ಪತ್ತೆಯಾಗಿವೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈಗಾಗಲೇ ಸುಧಾ ಅವರ ಮನೆಯಲ್ಲಿ ದೊರೆತಿರುವ ಚಿನ್ನಾಭರಣ, ಚರ-ಸ್ಥಿರ ಆಸ್ತಿ ಬಗ್ಗೆ ಇನ್ನೂ ಮೌಲ್ಯಮಾಪನ ನಡೆಸಲಾಗುತ್ತಿದ್ದು, ಸದ್ಯದಲ್ಲೇ ಮಾಹಿತಿ ನೀಡುವುದಾಗಿ ಎಸಿಬಿ ಅಕಾರಿಗಳು ತಿಳಿಸಿದ್ದಾರೆ. ಇವರ ಪುತ್ರ ಕೂಡ ಎಇಇ ಆಗಿದ್ದು, ಒಟ್ಟಾರೆ ಪ್ರಕರಣದ ತನಿಖೆ ಭಾರೀ ಕುತೂಹಲ ಕೆರಳಿಸಿದೆ.


Spread the love

About Laxminews 24x7

Check Also

ಬೆಳಗಾವಿಗೆ ಆಗಮಿಸಲಿದ್ದಾರೆ ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ

Spread the loveಬೆಳಗಾವಿ: ಶಿರಸಿ ವೇದ ವೆಲ್‌ನೆಸ್ ಸೆಂಟರ್ ಹಾಗೂ ನಿಸರ್ಗಮನೆ ಖ್ಯಾತ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ