ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳನ್ನು ಸ್ಥಗಿತ ಮಾಡಲಾಗಿದೆ.
ರದ್ದಾದ ರೈಲುಗಳು?
1. ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು
2. ಮೈಸೂರು-ಕೆ.ಎಸ್.ಆರ್, ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲು
3. ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು
4. ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು
5. ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್‌ಪ್ರೆಸ್ ರೈಲು, (ಮಾರ್ಚ್ 20 ಮತ್ತು ಮಾರ್ಚ್ 27 ರ ಪ್ರಯಾಣ ಸೇವೆ ರದ್ದು)
6. ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 21 ಮತ್ತು ಮಾರ್ಚ್ 28 ರ ರೈಲು ಸೇವೆ ರದ್ದು)
7. ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 23 ಮತ್ತು ಮಾರ್ಚ್ 30 ರ ರೈಲು ಸೇವೆ ರದ್ದು)
8. ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್‌ಪ್ರೆಸ್ (ರೈಲು ಮಾರ್ಚ್ 24 ಮತ್ತು ಮಾರ್ಚ್ 31 ರ ರೈಲು ಸೇವೆ ರದ್ದು)
9. ಹುಬ್ಬಳ್ಳಿ-ಕೆ.ಎಸ್.ಆರ್, ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು
10. ಯಶವಂತಪುರ-ಶಿವಮೊಗ್ಗ, ಟೌನ್-ಯಶವಂತಪುರ ವಿಷೇಶ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು
11. ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 19 ಮತ್ತು ಮಾರ್ಚ್ 26 ರ ರದ್ದು)
12. ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 20 ಮತ್ತು ಮಾರ್ಚ್ 27 ರ ಸೇವೆ ರದ್ದು)
13. ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು (ಮಾರ್ಚ್ 23 ಮತ್ತು ಮಾರ್ಚ್ 30 ರ ಸೇವೆ ರದ್ದು)
14. ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು (ಮಾರ್ಚ್ 26 ಮತ್ತು ಏಪ್ರಿಲ್ 02 ರ ಸೇವೆ ರದ್ದು)