Breaking News

ನಿಧನರಾದ ಆನಂದ ಚೋಪ್ರಾರವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದಸತೀಶ್ ಜಾರಕಿಹೊಳಿ

Spread the love

ಸವದತ್ತಿ: ಸವದತ್ತಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು, ಅನಾರೋಗ್ಯದಿಂದ ನಿಧನರಾದ ತಾಲ್ಲೂಕಿನ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾರವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಮಾತನಾಡಿದ ಅವರು, ಆನಂದ ಚೋಪ್ರಾ ಅವರು ಕಳೆದ ಒಂದುವರೆ ದಶಕದಿಂದ ಸಾಮಾಜಿಕ ಸೇವಕಾರಗಿ ಗುರುತಿಸಿಕೊಂಡಿದ್ದರು. ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಜನರಿಗೆ ಹತ್ತಿರವಾಗಿದ್ದರು. ಶೈಕ್ಷಣಿಕ, ಸಾಮಾಜಿಕ, ಕ್ರೀಡೆ, ಸಾಹಿತ್ಯ, ಮತ್ತು ರಾಜಕೀಯವಾಗಿ ಸಾಕಷ್ಟು ಪ್ರಭಾವಿಗಳಾಗಿದ್ದರು. ಅವರ ಅಕಾಲಿಕ ನಿಧನ ನನಗೂ ಕೂಡಾ ಆಗಾತವಾಗಿದೆ.

ಸಮಾಜದ ಎಲ್ಲ ವರ್ಗದ ಜನರೊಂದಿಗೆ ಬೆರತು. ಸದಾ ಬಡವರ ಪರ ಧ್ವನಿಯಾಗಿ ನಿಲ್ಲುತ್ತಿದ್ದರು. ಹಾಗಾಗಿಯೇ ಸವದತ್ತಿ ತಾಲ್ಲೂಕಿನಲ್ಲಿಯೇ ಆನಂದ ಚೋಪ್ರಾ ಅವರು, ಅತ್ಯಂತ ಜನಪರ ನಾಯಕರಾಗಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸವದತ್ತಿಯ ವಿಶ್ವಾಸ್ ವೈದ್ಯ, ಬ್ಲಾಕ್ ಕಾಂಗ್ರೆಸ್ ಪ್ರಸಿಡೆಂಟ್ ಮಲ್ಲು ಜಕಾತಿ, ರವಿ ಯಲಿಗಾರ, ಪಂಚಪ್ಪ ಮಲ್ಲಡ್ಡ, ಪಂಚನಗೌಡ ದ್ಯಾಮನಗೌಡರ್, ಸದಾನಂದ್ ಕೌಜಲಗಿ ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಗೊಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ-ತಾಂತ್ರಿಕ ಉತ್ಸವ

Spread the loveಬೆಳಗಾವಿ: ಬೆಳಗಾವಿಯ KLS Gogte Institute of Technology ನಲ್ಲಿ ಮಾರ್ಚ್ 11 ರಿಂದ 14ರವರೆಗೆ ನಡೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ