Breaking News

ಜೇಡವೊಂದು ಪಕ್ಷಿಯನ್ನು ನುಂಗಿರುವ ವಿಡಿಯೋ

Spread the love

ಈ ಪ್ರಕೃತಿ ಎಷ್ಟೋ ವಿಸ್ಮಯವೋ ಅಷ್ಟೇ ಭಯಾನಕ. ಇದಕ್ಕೆ ಸಾಕ್ಷಿ ಎಂಬಂತೆ ಅರಣ್ಯ ಪ್ರದೇಶವೊಂದರಲ್ಲಿ ಜೇಡವೊಂದು ಪಕ್ಷಿಯನ್ನು ನುಂಗಿರುವ ವಿಡಿಯೋ ಬಹಿರಂಗಗೊಂಡಿದೆ. ಭಯ ಹುಟ್ಟಿಸುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಪ್ರತಿಕ್ರಿಯಿಸಿದ್ದಾರೆ.

ನೇಚರ್ ಇಸ್ ಸ್ಕೇರಿ(ಪ್ರಕೃತಿ ಭಯಾನಕ) ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ 54 ಸೆಕೆಂಡ್‍ಗಳ ಈ ವಿಡಿಯೋದಲ್ಲಿ ಕಡುಕಪ್ಪು ಬಣ್ಣದ ಜೇಡವೊಂದು ಸಾಮಾನ್ಯ ಗಾತ್ರದ ಪಕ್ಷಿಯನ್ನು ನುಂಗುತ್ತಿರುವ ದೃಶ್ಯವಿದೆ. ತನಗಿಂತಲೂ ಹಲವು ಪಟ್ಟು ದೊಡ್ಡದಾದ ಈ ಪಕ್ಷಿಯನ್ನು ಈ ಜೇಡ ನಿಧಾನವಾಗಿ ಕಬಳಿಸುತ್ತಿರುವ ದೃಶ್ಯ ಭಯಮೂಡಿಸುತ್ತದೆ.

ಕೆಲವು ದಿನಗಳ ಹಿಂದಷ್ಟೇ ತನ್ನ ಗೂಡಿಗೆ ನುಗ್ಗಿ ಮರಿಗಳನ್ನು ತಿನ್ನಲು ಯತ್ನಿಸಿದ್ದ ಸಣ್ಣ ಹಾವಿನ ಮೇಲೆ ಜೇಡವೊಂದು ಮಾರಣಾಂತಿಕ ದಾಳಿ ಮಾಡಿ ಹಿಮ್ಮೆಟ್ಟಿಸಿತ್ತು. ಇದರ ಬೆನ್ನಲ್ಲೇ ಜೇಡ ಸಾಮಾನ್ಯ ಗಾತ್ರದ ಪಕ್ಷಿಯನ್ನು ಕಬಳಿಸುತ್ತಿರುವ ದೃಶ್ಯವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ರೀಟ್ವೀಟ್ ಮಾಡಿದ್ದಾರೆ.

ಕೆಲವರು ಈ ದೃಶ್ಯಕ್ಕೆ ಭಯ ಆಶ್ಚರ್ಯ ಸೂಚಿಸಿದ್ದರೆ, ಇನ್ನು ಕೆಲವರು ನಿಮ್ಮ ಮನೆಗಳಲ್ಲಿ ಪಕ್ಷಿಗಳನ್ನು ಸಾಕಿದ್ದರೆ ಇಂಥ ಆಕ್ರಮಣಕಾರಿ ಜೇಡಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ಮಾಡಿದ್ದಾರೆ. ಪ್ರಕೃತಿಯ ಈ ವಿಸ್ಮಯ ಯಾವ ಅರಣ್ಯದಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.

Facebook Comments

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ