Breaking News

ಹೆಂಡ್ತಿಗೆ ಫೋನ್ ಮಾಡ್ಬೇಕು ಅಂತ ಲವ್ವರ್‌ಗೆ ಕಾಲ್ – ತಗ್ಲಾಕ್ಕೊಂಡ ವೈಭವ್

Spread the love

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದ ಆರೋಪಿಯಾಗಿರುವ ವೈಭವ್ ಜೈನ್ ಹೆಂಡತಿಗೆ ಫೋನ್ ಮಾಡಬೇಕು ಎಂದು ಲವ್ವರ್‌ಗೆ ಕಾಲ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಡ್ರಗ್ಸ್ ಕೇಸ್ ಆರೋಪಿ ವೈಭವ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಹೆಂಡತಿಗೆ ಫೋನ್ ಮಾಡಬೇಕು ಎಂದು ಹೇಳಿ ಸಿಕ್ಕಿಬಿದ್ದಿದ್ದಾನೆ. ಇವತ್ತು ನಾನು ಮದುವೆಯಾದ ದಿನ. ಹೀಗಾಗಿ ನನ್ನ ಪತ್ನಿಗೆ ಫೋನ್ ಮಾಡಿ ಶುಭಾಶಯ ತಿಳಿಸಬೇಕು. ದಯವಿಟ್ಟು ನಿಮ್ಮ ಫೋನ್ ಕೊಡಿ ಸಾರ್ ಎಂದು ಪೊಲೀಸರ ಬಳಿ ಮೊಬೈಲ್ ಕೇಳಿದ್ದನು. ಇದಕ್ಕೆ ಒಪ್ಪಿದ ಪೊಲೀಸರು ಆತನಿಗೆ ಫೋನ್ ಕೊಟ್ಟಿದ್ದಾರೆ.

ಆರೋಪಿ ವೈಭವ್ ಜೈನ್ ಪೊಲೀಸರ ಮೊಬೈಲ್‍ನಿಂದಲೇ ಫೋನ್ ಮಾಡಿದ್ದನು. ಈ ವೇಳೆ ಆರೋಪಿ ವೈಭವ್ ಪೊಲೀಸರ ಮೊಬೈಲ್‍ನಿಂದ ಹೆಂಡತಿ ಬದಲು ಪ್ರಿಯತಮೆಗೆ ಫೋನ್ ಮಾಡಿದ್ದಾನೆ. ಮರುದಿನ ವೈಭವ್ ಪತ್ನಿ ಬಟ್ಟೆ ತೆಗೆದುಕೊಂಡು ಸಿಸಿಬಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಕಳೆದ ದಿನ ನೀವು ಮದುವೆ ಆಗಿ ವರ್ಷ ಆಯ್ತಂತೆ, ಫೋನ್ ಮಾಡಿದ್ನಲ್ವಾ? ಎಂದು ವೈಭವ್ ಜೈನ್ ಕರೆಯ ಬಗ್ಗೆ ಆತನ ಪತ್ನಿಗೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

ಆಗ ಆತನ ಪತ್ನಿ, “ಇಲ್ಲ ಸಾರ್, ನನಗೆ ಫೋನ್ ಮಾಡಿಲ್ಲ. ನಮ್ಮ ಮದುವೆ ವಾರ್ಷಿಕೋತ್ಸವ ಇಲ್ಲ” ಎಂದು ಉತ್ತರಿಸಿದ್ದಾರೆ ಪತ್ನಿಯ ಉತ್ತರದಿಂದ ಪೊಲೀಸರ ಕೈಯಲ್ಲಿ ವೈಭವ್ ಜೈನ್ ರೆಡ್‍ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ