Breaking News

ರಾಗಿಣಿ ಡ್ರಗ್ಸ್ ಕೇಸ್- ಹುಬ್ಬಳ್ಳಿ ‘ಕೈ’ ಮುಖಂಡನಿಗೆC.C.B.ಯಿಂದ ವಿಚಾರಣೆ

Spread the love

ಹುಬ್ಬಳ್ಳಿ: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಅವರನ್ನ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಗಿರೀಶ್ ಗದಿಗೆಪ್ಪಗೌಡರ್ ಮಾಜಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡ. ನಟಿ ರಾಗಿಣಿ ದ್ವಿವೇದಿ ಮೊಬೈಲ್ ನಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಫೋಟೋ ಲಭ್ಯವಾದ ಹಿನ್ನೆಲೆ ಸಿಸಿಬಿ ಪೊಲೀಸರು ಗಿರೀಶ್ ಅವರನ್ನ ವಿಚಾರಣೆ ನಡೆಸಿದ್ದಾರೆ. ರಾಗಿಣಿ ಮತ್ತು ಗಿರೀಶ್ ಜೊತೆಯಾಗಿ ಗೋವಾಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಗೋವಾದಲ್ಲಿ ರಾಗಿಣಿ ಜೊತೆ ಗಿರೀಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಟಿಯ ಬಂಧನವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ರಾಗಿಣಿ ಜೊತೆಗಿನ ಫೋಟೋಗಳನ್ನ ಡಿಲೀಟ್ ಮಾಡಿಕೊಂಡಿದ್ದರು. ಸದ್ಯ ಸಿಸಿಬಿ ಹಳೆಯ ಫೋಟೋಗಳನ್ನ ಹಿಡಿದು ವಿಚಾರಣೆ ನಡೆಸುತ್ತಿದೆ.

ಇಂದು ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ವಿಚರಣೆ ವೇಳೆ ತಮ್ಮ ಜೊತೆ ಪಾರ್ಟಿಗೆ ಬರುತ್ತಿದ್ದ ರಾಜಕಾರಣಿಗಳ ಹೆಸರು ಬರೆದುಕೊಟ್ಟಿರುವ ಬಗ್ಗೆ ವರದಿ ಮಾಡಿತ್ತು. ಇತ್ತ ವರದಿ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನನ್ನ ಸಿಸಿಬಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ