Breaking News

ಮಡಿಕೇರಿ -ಮೈಸೂರು ರಸ್ತೆ ಸಂಪರ್ಕ ಬಂದ್

Spread the love

ಮಡಿಕೇರಿ/ಮೈಸೂರು: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಮಡಿಕೇರಿ – ಮೈಸೂರು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕುಶಾಲನಗರ ಬಳಿಯ ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಹೆದ್ದಾರಿ ಜಲಾವೃತವಾಗಿದೆ. ಹೆದ್ದಾರಿ ಬಂದ್‌ ಆಗಿರುವ ಕಾರಣ ಎರಡು ಕಡೆ ವಾಹನಗಳು ಸಾಲಾಗಿ ನಿಂತಿವೆ.ಭಾರೀ ಮಳೆಯಿಂದ ಸೂತ್ತೂರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೂತ್ತೂರು ಕ್ಷೇತ್ರದ ಸುತ್ತ ಮುತ್ತ ತೋಟ ಜಮೀನಿಗೆ ನೀರು ನುಗ್ಗಿದೆ.ಕಬಿನಿ ಡ್ಯಾಂನಿಂದ ನದಿಗೆ 50ಸಾವಿರ ಕ್ಯೂಸೆಕ್‌ ನೀರು ಬಿಟ್ಟ ಹಿನ್ನಲೆಯಲ್ಲಿ ನಂಜನಗೂಡಿನ ಕಪಿಲಾ‌ ನದಿಯ ಸ್ನಾನಘಟ್ಟ ಮುಳುಗಡೆಯಾಗಿದೆ. ಮೆಟ್ಟಿಲುಗಳ ಬಳಿಯಿದ್ದ ರಾಮಾಂಜನೇಯ ದೇಗುಲ, ಅರಳಿಮರ ಸೇರಿದಂತೆ ನವಗ್ರಹ ವಿಗ್ರಹಗಳು ಸಹ ಮುಳುಗಡೆಯಾಗಿದೆ.

Spread the love

About Laxminews 24x7

Check Also

ಹಲವರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Spread the loveಮಡಿಕೇರಿ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಹಲವರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ