Breaking News
Electricity Pylons at sunset on background

ಬೆಳಗಾವಿಯಲ್ಲಿ ಇಂದು 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ: ಹಲವು ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

Spread the love

ಬೆಳಗಾವಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವತಿಯಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 17ರಂದು ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ನಗರದ ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಹಲವು ಬಡಾವಣೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಕೆ.ವಿ. ಪೋರ್ಟ್ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಕೆ.ವಿ. ಪೋರ್ಟ್ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಎಫ್-1 ಆಜಾದ್ ನಗರ, ಎಫ್-5 ಶೆಟ್ಟಿ ಗಲ್ಲಿ, ಎಫ್-6 ಖಡೇಬಜಾರ್ ಹಾಗೂ ಎಫ್-8 ಮಾಳಿ ಗಲ್ಲಿ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಮಾದೇವಿ ಗಲ್ಲಿ, ಗೋಂದಳಿ ಗಲ್ಲಿ, ರಿಸಾಲ್ದಾರ್ ಗಲ್ಲಿ, ನಾರ್ವೇಕರ ಗಲ್ಲಿ, ಕಾಕತಿ ವೇಸ್ ರಸ್ತೆ, ಶನಿವಾರ ಕೂಟ, ಕಚೇರಿ ರಸ್ತೆ, ಕಂಜರ ಗಲ್ಲಿ, ದರ್ಬಾರ್ ಗಲ್ಲಿ, ಖಡೇಬಜಾರ್, ಮಾಳಿ ಗಲ್ಲಿ, ತೆಂಗಿನಕೇರಿ ಗಲ್ಲಿ, ಬೆಂಡಿಬಜಾರ್, ಪಾನಗೋಳ ಗಲ್ಲಿ, ಭೂವಿ ಗಲ್ಲಿ, ಮೇನತಿ ಗಲ್ಲಿ, ಆಜಾದ್ ಗಲ್ಲಿ, ಕಾಮತ್ ಗಲ್ಲಿ, ಐಬಿ ಸೆಂಟರ್, ಕೇಂದ್ರ ಬಸ್ ನಿಲ್ದಾಣ, ಶೆಟ್ಟಿ ಗಲ್ಲಿ, ಚವಾಟ ಗಲ್ಲಿ, ನಾನಾ ಪಾಟೀಲ್ ಚೌಕ್, ಜಾಲಗಾರ ಗಲ್ಲಿ, ಕಶಾಯಿ ಗಲ್ಲಿ, ಕೋತವಾಲ್ ಗಲ್ಲಿ, ಡಿಸಿಸಿ ಬ್ಯಾಂಕ್, ಅರಣ್ಯ ಇಲಾಖೆ ಕಚೇರಿ, ಆರ್‌ಟಿಒ ಕಚೇರಿ, ಕೀರ್ತಿ ಹೋಟೆಲ್, ಶೀತಲ್ ಹೋಟೆಲ್, ಆಜಾದ್ ನಗರ, ಹಳೆ ಗಾಂಧಿನಗರ, ದೀಪಕ್ ಗಲ್ಲಿ, ಸಂಗಮ್ ಹೋಟೆಲ್ ಹಾಗೂ ಬಾಗಲಕೋಟೆ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಕೆ.ವಿ. ನೆಹರು ನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ವ್ಯತ್ಯಯ

ಕೆ.ವಿ. ನೆಹರು ನಗರ ಉಪಕೇಂದ್ರದ ಎಫ್-15 ವಿಶ್ವೇಶ್ವರಯ್ಯ ನಗರ, ಎಫ್-9 ಸದಾಶಿವ ನಗರ, ಎಫ್-4 ವೈಭವ ನಗರ, ಎಫ್-1 ಇಂಡಾಲ ಹಾಗೂ ಎಫ್-10 ಜೈನಾಬಕುಲ್ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇಂಡಸ್ಟ್ರಿಯಲ್ ಏರಿಯಾ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂ ನಗರ, ಸಂಗಮೇಶ್ವರ ನಗರ, ಕೆಎಲ್‌ಇ ಪ್ರದೇಶ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಸೈಟ್ ರಸ್ತೆ, ಇಂಡಾಲ ಪ್ರದೇಶ, ಸಿವಿಲ್ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ, ಅಂಬೇಡ್ಕರ್ ನಗರ, ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ, ಜಿಲ್ಲಾ ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಆವರಣ, ಸಿಟಿ ಪೊಲೀಸ್ ಲೈನ್, ಕಾಕತಿ ವೇಸ್, ಕಾಳೆ ಅಂಬ್ರಾಯಿ, ಕ್ಲಬ್ ರಸ್ತೆ, ರೈಲನಗರ, ಸಂಪಿಗೆ ರಸ್ತೆ, ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್, ಪಿ ಆ್ಯಂಡ್ ಟಿ ಕಾಲನಿ (ಹನುಮಾನ ನಗರ), ಮುರಳೀಧರ ಕಾಲನಿ ಹಾಗೂ ಜೈನಾಬಕುಲ್ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕೆ.ವಿ. ಸದಾಶಿವ ನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ವ್ಯತ್ಯಯ

ಕೆ.ವಿ. ಸದಾಶಿವ ನಗರ ಉಪಕೇಂದ್ರದ ಎಫ್-1 ಕುಮಾರಸ್ವಾಮಿ ಲೇಔಟ್, ಎಫ್-2 ಹನುಮಾನ ನಗರ ಹಾಗೂ ಎಫ್-3 ಸಹ್ಯಾದ್ರಿ ನಗರ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರಥಿ ನಗರ, ಪೊಲೀಸ್ ಕಾಲನಿ, ವಿದ್ಯಾನಗರ, ನೀರಾವರಿ ಇಲಾಖೆ ಕಾಲನಿ, ಕುಮಾರಸ್ವಾಮಿ ಲೇಔಟ್, ಬಸವೇಶ್ವರ ನಗರ, ಕುವೆಂಪು ನಗರ, ಮುರಳೀಧರ ಕಾಲನಿ, ಲಕ್ಷ್ಮೀ ಹೆಬ್ಬಾಳ್ಕರ್ ಆಜಾದ್ ಹೌಸಿಂಗ್ ಸೊಸೈಟಿ, ಶ್ರೀರಾಮ ಕಾಲನಿ, ತಾಜಿಬಾ ದೇಸಾಯಿ ಕಾಲನಿ, ಹನುಮಾನ ನಗರ ವೃತ್ತ, ಹನುಮಾನ ನಗರದ ಮೊದಲನೇ ಹಂತದ 2, 3, 4 ಮತ್ತು 5ನೇ ಹಂತಗಳು, ಕೆಎಲ್‌ಇ ಸ್ಕೂಲ್, ಪ್ರೆಸ್ ಕಾಲನಿ, ಚಿಕ್ಕುಬಾಗ, ಸಹ್ಯಾದ್ರಿ ನಗರ, ಮಹಾಬಲೇಶ್ವರ ಮಂದಿರ, ನೀಲಗಿರಿ ಟ್ರೇಸ್, ವಾಟರ್ ಟ್ಯಾಂಕ್ ಹಾಗೂ ಬಸವೇಶ್ವರ ನಗರ ನೀರು ಸರಬರಾಜು ಸ್ಥಾವರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಆರ್‌ಎಂ-2 ಚಿಐಎಸ್ ಉಪಕೇಂದ್ರ ವ್ಯಾಪ್ತಿಯಲ್ಲಿ ವ್ಯತ್ಯಯ

ಆರ್‌ಎಂ-2 ಚಿಐಎಸ್ ಉಪಕೇಂದ್ರದ ಎಫ್-2 ಹಿಂದವಾಡಿ, ಎಫ್-3 ಜಕ್ಕೇರಿ ಹೊಂಡಾ, ಎಫ್-5 ಪಾಟೀಲ್ ಗಲ್ಲಿ, ಎಫ್-6 ಸಿಟಿ, ಎಫ್-7 ಎಂಇಎಸ್, ಎಫ್-8 ಕಂಟೋನ್ಮೆಂಟ್ ಹಾಗೂ ಎಫ್-9 ಮಾರುತಿ ಗಲ್ಲಿ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಕ ಚೌಕ್, ಶಿವಭವನ, ಸ್ಟೇಷನ್ ರಸ್ತೆ, ಕೋನ್ಸಾಲ್ ಗಲ್ಲಿ, ಶಿವಾಜಿ ರಸ್ತೆ, ಬಸವನ ಗಲ್ಲಿ, ದೇಶಪಾಂಡೆ ಗಲ್ಲಿ, ಬೋಗಾರ್ವೆಸ್, ಖಾನಾಪುರ ರಸ್ತೆ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಕ್ಯಾಂಪ್ ಪ್ರದೇಶ, ವಿನಾಯಕ ನಗರ, ಸೈನಿಕ ನಗರ, ಗಣೇಶಪುರ ರಸ್ತೆ, ಸ್ಕೀಮ್ ನಂ.51, ವಿಜಯ ನಗರ, ಮರಾಠಾ ಕಾಲನಿ, ಜಯನಗರ, ಸ್ಕೀಮ್ ನಂ.40, ಸಂಕಲ್ಪ ಲೇಔಟ್, ಕೆಎಚ್‌ಬಿ ಕಾಲನಿ, ಬಂಜಾರಾ ಕಾಲನಿ, ಓಂಕಾರ ನಗರ, ಚಿಕ್ಕುಬಾಗ, ಕುವೆಂಪು ನಗರ, ಆಜಾದ್ ಹೌಸಿಂಗ್ ಸೊಸೈಟಿ, ಪಾಟೀಲ್ ಗಲ್ಲಿ, ಮುಜಾವರ ಗಲ್ಲಿ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಸಮಾದೇವಿ ಗಲ್ಲಿ, ಅನದೂರಕರ ಗಲ್ಲಿ, ಕೇಳಕರ ಭಾಗ, ಖಡೋಳ್ಳರ್ ಗಲ್ಲಿ, ಹಂಸ್ ಚಿತ್ರಮಂದಿರ, ಸಂಪೂರ್ಣ ಮಿಲಿಟರಿ ಪ್ರದೇಶ, ವಿಜಯ ನಗರ, ಇಂಡಾಲ, ರೈಲ್ವೆ ಗೇಟ್, ಸರಾಫ್ ಗಲ್ಲಿ, ಆರ್‌ಪಿಡಿ ಅಡ್ಡ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ, ವಡ್ಡರ ಗಲ್ಲಿ, ಇಂದ್ರಪ್ರಸ್ಥ, ಸರ್ವೋದಯ ಹಾಸ್ಟೆಲ್, ಗುಡ್‌ಪೇಟ್ ರಸ್ತೆ, ಮಹಾತ್ಮಾ ಫುಲೆ ರಸ್ತೆ, ಮೀರಾಪುರ ಗಲ್ಲಿ, ಕಚೇರಿ ಗಲ್ಲಿ, ಕೋರೆ ಗಲ್ಲಿ, ಭೋಜ ಗಲ್ಲಿ, ಹಟ್ಟಿಹೊಳ ಗಲ್ಲಿ, ಖಡೇಬಜಾರ್ ಹಾಗೂ ಶಹಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯುತ್ ಅವಲಂಬಿತ ಕೆಲಸಗಳನ್ನು ಬೆಳಿಗ್ಗೆ 9 ಗಂಟೆಯೊಳಗೆ ಪೂರ್ಣಗೊಳಿಸಿಕೊಳ್ಳುವಂತೆ ಹೆಸ್ಕಾಂ ಮನವಿ ಮಾಡಿದೆ.

ಕಾರ್ಯ ಮತ್ತು ಪಾಲನೆ, ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಅತ್ತೆಯನ್ನು ನೋಡಿದಾಗ ಭಯವಾಗ್ತಿತ್ತು – ಸೋನಿಯಾ ಗಾಂಧಿ

Spread the loveನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’  ಕೃತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ