ಬೆಂಗಳೂರು: ನಗರದಲ್ಲಿ ನಡೆದ ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್ನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 31ನೇ ಎಸಿಜೆಎಂ ಕೋರ್ಟ್ ಆದೇಶಿಸಿದೆ.
ಬಾಡೂಟಕ್ಕೆ ಕರೆದು 7 ಜನರನ್ನೂ ಆರೋಪಿ ಇಂದುಶೇಖರ್ ಹತ್ಯೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹದಿನೈದು ದಿನಗಳ ಅಂತರದಲ್ಲಿ ಏಳು ಜನರ ಬರ್ಬರ ಹತ್ಯೆ ಮಾಡಿದ್ದಾನೆ. ಮೊದಲಿಗೆ ತನ್ನ ಹೆಂಡತಿ ಸುನೀತಾಳನ್ನು ಕೊಲೆ ಮಾಡಿದ್ದ. ನಂತರ ಅತ್ತೆ ರೂಪಾವತಿಗೆ ಕರೆ ಮಾಡಿ ಆರೋಪಿಯ ಅಪ್ರಾಪ್ತ ಮಗಳು ಬಾಡೂಟಕ್ಕೆ ಕರೆದಿದ್ದಳು. ಊಟಕ್ಕೆ ಬಂದ ಅತ್ತೆಯನ್ನು ರುಬ್ಬುವ ಗುಂಡು ಬಳಸಿ ಕೊಲೆ ಮಾಡಿದ್ದ.
ಮೃತದೇಹದ ಎಸೆದು ಅಪ್ಪ-ಮಗಳು ಮನೆ ಕ್ಲೀನ್ ಮಾಡಿದ್ದರು. ನಂತರ ಬಾಮೈದುನಾ ಶಿವಕುಮಾರ್ ಮತ್ತು ದಿವ್ಯಾಳ ಕೊಲೆ ನಡೆದಿದೆ. ಆ ಬಳಿಕ ಶಂಕರ್ ಮತ್ತು ನಳಿನಾ, ದಂಪತಿಯನ್ನು ಊಟಕ್ಕೆ ಕರೆದಿದ್ದ. ಪ್ರತಿ ಬಾರಿ ಇಂದುಶೇಖರ್ ಮಗಳ ಕೈಯಿಂದಲೇ ಕರೆ ಮಾಡಿಸಿ ಮನೆಗೆ ಕರೆಸಿದ್ದ. ಕೊನೆಯದಾಗಿ ಶಂಕರ್ ಮತ್ತು ನಳಿನಾ, ಏಳು ವರ್ಷದ ಮಗನನ್ನು ಕ್ರೂರವಾಗಿ ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
Laxmi News 24×7