ಚೆನ್ನೈ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ 7 ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ತಮಿಳುನಾಡಿನ ಸೇಲಂ ಸಮೀಪದ ಎರ್ನಾಕುಲಂನ ಅರಣ್ಯ ಭಾಗದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮೃತದೇಹ ಯಾರದ್ದು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಮೃತದೇಹ ಗುರುತು ಪತ್ತೆ ಮಾಡಲು ನ.7 ರಂದು ಸೇಲಂಗೆ ಕುಟುಂಬಸ್ಥರು ತೆರಳಲಿದ್ದಾರೆ. ಕುಟುಂಬಸ್ಥರನ್ನು ಕರೆದೊಯ್ಯಲು ಪೊಲೀಸರು ವಾಹನದ ವ್ಯವಸ್ಥೆ ಮಾಡಿದ್ದಾರೆ.
ತನಿಖೆ ವೇಳೆ ಬೆಂಗಳೂರಿನ ಹೊರ ವಲಯದಲ್ಲೂ ಮೃತದೇಹಗಳನ್ನು ಬಿಸಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೊಸಕೋಟೆ ಆಸುಪಾಸಿನಲ್ಲಿ ಮೃತದೇಹಗಳನ್ನು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಬಾಡೂಟಕ್ಕೆ ಕರೆದು 7 ಜನರನ್ನೂ ಆರೋಪಿ ಇಂದುಶೇಖರ್ ಹತ್ಯೆ ಮಾಡಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಹದಿನೈದು ದಿನಗಳ ಅಂತರದಲ್ಲಿ ಏಳು ಜನರ ಬರ್ಬರ ಹತ್ಯೆ ಮಾಡಿದ್ದಾನೆ. ಮೊದಲಿಗೆ ತನ್ನ ಹೆಂಡತಿ ಸುನೀತಾಳನ್ನು ಕೊಲೆ ಮಾಡಿದ್ದ. ನಂತರ ಅತ್ತೆ ರೂಪಾವತಿಗೆ ಕರೆ ಮಾಡಿ ಆರೋಪಿಯ ಅಪ್ರಾಪ್ತ ಮಗಳು ಬಾಡೂಟಕ್ಕೆ ಕರೆದಿದ್ದಳು. ಊಟಕ್ಕೆ ಬಂದ ಅತ್ತೆಯನ್ನು ರುಬ್ಬುವ ಗುಂಡು ಬಳಸಿ ಕೊಲೆ ಮಾಡಿದ್ದ.
ಮೃತದೇಹದ ಎಸೆದು ಅಪ್ಪ-ಮಗಳು ಮನೆ ಕ್ಲೀನ್ ಮಾಡಿದ್ದರು. ನಂತರ ಬಾಮೈದುನಾ ಶಿವಕುಮಾರ್ ಮತ್ತು ದಿವ್ಯಾಳ ಕೊಲೆ ನಡೆದಿದೆ. ಆ ಬಳಿಕ ಶಂಕರ್ ಮತ್ತು ನಳಿನಾ, ದಂಪತಿಯನ್ನು ಊಟಕ್ಕೆ ಕರೆದಿದ್ದ. ಪ್ರತಿ ಬಾರಿ ಇಂದುಶೇಖರ್ ಮಗಳ ಕೈಯಿಂದಲೇ ಕರೆ ಮಾಡಿಸಿ ಮನೆಗೆ ಕರೆಸಿದ್ದ. ಕೊನೆಯದಾಗಿ ಶಂಕರ್ ಮತ್ತು ನಳಿನಾ, ಏಳು ವರ್ಷದ ಮಗನನ್ನು ಕ್ರೂರವಾಗಿ ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
Laxmi News 24×7