ಬೆಂಗಳೂರು: ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಯಾವತ್ತು ಸರ್ವಪಕ್ಷದ ನಿಯೋಗಕ್ಕೆ ಕರೆದುಕೊಂಡು ಹೋದ ಉದಾಹರಣೆ ಇಲ್ಲ ಅಂತ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಬರ ಪರಿಹಾರ ಕೇಳಲು ಸರ್ವಪಕ್ಷ ನಿಯೋಗ ಹೋಗೊದಕ್ಕೆ ವಿಪಕ್ಷಗಳು ಸಹಕಾರ ಕೊಡ್ತಿಲ್ಲ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಎರಡು ತಿಂಗಳಿಂದ ನೋಡ್ತಾ ಇದ್ದೀನಿ ರಾಜ್ಯ ಸರ್ಕಾರ ಕೇವಲ ಪತ್ರ ವ್ಯವಹಾರ ಮಾಡಿದೆ. ಕಂದಾಯ ಸಚಿವರು ಮೋದಿ, ಅಮಿತ್ ಶಾ, ಕೃಷಿ ಸಚಿವರನ್ನ ಭೇಟಿ ಮಾಡೋ ಸೌಜನ್ಯ ತೋರಿಸಿಲ್ಲ. 2 ತಿಂಗಳಲ್ಲಿ 10 ರೀತಿ ಪತ್ರ ಬರೆದಿದ್ದಾರೆ. ಮೊದಲು 3 ಸಾವಿರ ಕೋಟಿ ಅಂದು ಈಗ 26 ಸಾವಿರ ಕೋಟಿ ಕೊಡಿ ಅಂತಿದ್ದಾರೆ. ಬರದ ಸಂಪೂರ್ಣ ಮಾಹಿತಿ ಸರಿಯಾಗಿ ಕೊಡ್ತಿಲ್ಲ. ಬೇಕು ಬೇಕಾದ ರೀತಿ ಮಾಡ್ತಾ ಇದ್ದಾರೆ. ಇವರಿಗೆ ಗಾಂಭೀರ್ಯತೆ ಇದೆಯಾ? ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಾಸಕರು, ಜನರ ಡಿಮ್ಯಾಂಡ್ ಮೇಲೆ ಬರ ತಾಲೂಕ ಘೋಷಣೆ ಮಾಡಿದ್ದಾರೆ. ಇದನ್ನ ಮಾಡ್ತಿರೋದು ಮೊದಲ ಸಲ. ಬರಗಾಲಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿರೋ ಉದಾಹರಣೆ ನಾನು ನೋಡಿಲ್ಲ. ಸಿಎಂ, ಸಚಿವರು ಹೋಗಿ ಮನವಿ ಮಾಡೋದು ಸಹಜ. ಇದು ಹೊಸ ಸಂಪ್ರದಾಯ ಪ್ರಾರಂಭ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದರು.
ನಾನು 2018 ಸಿಎಂ ಆದಾಗ ಕೊಡಗಿನಲ್ಲಿ ನೆರೆ ಬಂತು ಆಗ ನಾನು ಕಾಂಗ್ರೆಸ್ ಜೊತೆ ಇದ್ದೆ. ಕೇಂದ್ರಕ್ಕೆ ನಾನು ಹೋಗಲಿಲ್ಲ. ಜನತೆ ತೆರಿಗೆ ಹಣದಲ್ಲಿ ಕೊಟ್ಟೆ. ಅಂದು ಪರಮೇಶ್ವರ್ ಡಿಸಿಎಂ ಆಗಿದ್ರು. ನಾವು ಕೇಂದ್ರಕ್ಕೆ ನಿಯೋಗ ಹೋಗಿಲ್ಲ. ರೈತರ ಸಾಲಮನ್ನಾ ಮಾಡೋಕೆ ನಾನು ಕೇಂದ್ರಕ್ಕೆ ನಿಯೋಗ ಹೋಗಲಿಲ್ಲ. ಈಗಿನ ಹೋಂ ಮಿನಿಸ್ಟರ್ ವೆಸ್ಟ್ ಆಂಡ್ ನಲ್ಲಿ ಇದ್ದೆ ಅಂತಾರೆ. ವೆಸ್ಟ್ ಅಂಡ್ ನಲ್ಲಿ ಕಾಲ ಕಳೆದಿದ್ದರೆ 25 ಸಾವಿರ ಕೋಟಿ ಸಾಲಮನ್ನಾ ಮಾಡೋಕೆ ಆಗ್ತಿತ್ತಾ? ಬಡವರಿಗಾಗಿ ಒಂದು ಬಿಲ್ ತಂದು ರಾಷ್ಟ್ರಪತಿಗಳಿಂದ ಸಹಿ ಹಾಕಿಸಿದೆ. ನಾನು ಪ್ರಚಾರ ಪಡೆಯಲಿಲ್ಲ. ನಾನು ಏನ್ ಮಾಡಿದ್ದೇನೆ. ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಇವರಿಂದ ಸರ್ಟಿಫಿಕೇಟ್ ಬೇಕಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
Laxmi News 24×7