Breaking News

ಗಂಡ, ಇಬ್ರು ಮುತ್ತಿನಂಥ ಮಕ್ಕಳಿದ್ರೂ ʻಪರಸಂಗʼ – ವಿವಾಹಿತೆ ಜೊತೆ ಯುವಕ ಆತ್ಮಹತ್ಯೆ; ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ

Spread the love

ಮಂಡ್ಯ: ರೈಲಿಗೆ ತಲೆ ಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಹೊರವಲಯದ ವಿಸಿ ಫಾರಂ ರೈಲ್ವೆ ಗೇಟ್ ಬಳಿ ನಡೆದಿದೆ.

ಸಹನ (25), ರಾಹುಲ್ (23) ಮೃತ ದುರ್ದೈವಿಗಳು. ಬೆಂಗಳೂರು ಮೂಲದ ಸಹನಾ ರಾಹುಲ್‌ ಇಂದು ಬೆಳಗ್ಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ರೈಲ್ವೆ ಪೊಲೀಸರು ಮೃತದೇಹಗಳನ್ನು ಮಂಡ್ಯದ ಮಿಮ್ಸ್‌ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಬಳಿಕ ಮೃತರ ಸಂಬಂಧಕರಿಗೆ ಮಾಹಿತಿ ನೀಡಿದ್ದಾರೆ.

ಅಕ್ರಮ ಸಂಬಂಧಕ್ಕೆ ಬಿತ್ತು ಎರಡು ಹೆಣ – ಏನಿದು ಘಟನೆ?
ಕಳೆದ 8 ವರ್ಷಗಳ ಹಿಂದೆ ಸಹನಾ ವೀರೇಶ್‌ನನ್ನ ಪ್ರೀತಿಸಿ ಮದ್ವೆಯಾಗಿದ್ದಳು. ದಂಪತಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗು ಇದೆ. ಸಹನಾಳ ಗಂಡ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಕಳೆದ 2-3 ವರ್ಷಗಳಿಂದ ದಂಪತಿಗಳಿಬ್ಬರು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಿದ್ದರು.

ವೀರೇಶ್‌ – ಸಹನಾ ಇದ್ದ ಬಿಲ್ಡಿಂಗ್‌ನಲ್ಲೇ ರಾಹುಲ್‌ ಕೂಡ ವಾಸವಿದ್ದ. ಇತ್ತೀಚೆಗೆ ಸಹನಾ, ರಾಹುಲ್‌ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿ, ಅಕ್ರಮ ಸಂಬಂಧದಲ್ಲಿದ್ದರು. ಈ ವಿಚಾರ ಗಂಡ ವೀರೇಶ್‌ಗೆ ತಿಳಿದು ಪದೇ ಪದೇ ಸಂಸಾರದಲ್ಲಿ ಜಗಳ ಆಗುತ್ತಿತ್ತು. ರೋಸಿಹೋಗಿದ್ದ ವೀರೇಶ್‌ ಮಾದನಾಯಕನಹಳ್ಳಿ ಬಿಟ್ಟು ಬೇರೆ ಕಡೆ ಮನೆ ಮಾಡಿದ್ದ. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಆಗಿತ್ತು. ಸಹನಾಗೆ ರಾಹುಲ್ ಸಹವಾಸ ಬಿಟ್ಟುಬಿಡುವಂತೆ ಬುದ್ಧಿ ಹೇಳಲಾಗಿತ್ತು. ಆದ್ರೆ ಯಾರ ಮಾತನ್ನೂ ಕೇಳದ ಸಹನಾ, ತನ್ನ ಹಳೇ ಚಾಳಿ ಮುಂದುವರಿಸಿದ್ದಳು.

Mandya Suicide 3

ಕಳೆದ ಸೋಮವಾರ ಕೂಡ ಇದೇ ವಿಚಾರಕ್ಕೆ ಸಹನಾ – ವಿರೇಶ್ ನಡುವೆ ಜಗಳ ಆಗಿತ್ತು. ಈ ವೇಳೆ ರಾಹುಲ್‌ ಜೊತೆಯೇ ಬಾಳುವುದಾಗಿ ಸಹನಾ ಕಡ್ಡಿ ತುಂಡಾದಂತೆ ಹೇಳಿದ್ದಳು. ಆಗ ವೀರೇಶ್‌ ನಿಮ್ಮಿಬ್ಬರನ್ನೂ ಬಾಳಲು ಬಿಡಲ್ಲ ಅಂತಾ ಬೆದರಿಕೆ ಹಾಕಿದ್ದ. ಇದರಿಂದ ಕೋಪಗೊಂಡಿದ್ದ ಸಹನಾ ಮಂಗಳವಾರ ಗಂಡನ ಮನೆಯಿಂದ ಹೊರಟು ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿಮನೆಗೆ ಬಂದಿದ್ದಳು.

ಗುರುವಾರ ಗುನ್ನಾಯಕನಹಳ್ಳಿಗೆ ಬಂದಿದ್ದ ರಾಹುಲ್‌ ಸಹನಾಳನ್ನ ಭೇಟಿಯಾಗಿದ್ದಾನೆ. ಬಳಿಕ ಇಬ್ಬರೂ ವೀರೇಶ್‌ ವಿರುದ್ಧ ದೂರು ಕೊಡಲು ತೀರ್ಮಾನಿಸಿದ್ದಾರೆ. ಆದರೆ ವಿರೇಶ್ ನಮ್ಮನ್ನ ಬಾಳಲು ಬಿಡಲ್ಲ ಅಂತಾ ಮನನೊಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಇಂದು ಬೆಳಿಗ್ಗೆ ರೈಲಿಗೆ ತಲೆಕೊಟ್ಟು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.


Spread the love

About Laxminews 24x7

Check Also

3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!

Spread the love ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ