Breaking News

ಅ.16ರಿಂದ 31ರವರೆಗೆ 15 ದಿನದಲ್ಲಿ 7 ಕೊಲೆ – ನರಮೇಧಕ್ಕೆ ಮಗಳು ಸಾಥ್, ತಪ್ಪೊಪ್ಪಿಕೊಂಡ ಹಂತಕ

Spread the love

ಬೆಂಗಳೂರು: ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ 7 ಜನರನ್ನು ಕೊಲೆ ಮಾಡಿದ ಥ್ರಿಲ್ಲಿಂಗ್ ಕೇಸ್‌ನಲ್ಲಿ ಕ್ಷಣಕ್ಷಣಕ್ಕೂ ರೋಚಕ ಅಂಶಗಳು ಹೊರಬೀಳುತ್ತಿವೆ. ಕೇವಲ 15 ದಿನದಲ್ಲಿ ಹಂತಕ ಏಳು ಜನರನ್ನು ಕೊಲೆ ಮಾಡಿರುವ ಅಂಶ ಈಗ ಬೆಳಕಿಗೆ ಬಂದಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ಇಂದುಶೇಖರ್ ಅ.16ರಿಂದ ಅ.31ರವರೆಗೆ ಹಂತ ಹಂತವಾಗಿ ಏಳು ಜನರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ತಾನು ನಡೆಸಿರುವ ನರಮೇಧಕ್ಕೆ ಮಗಳು ಹರ್ಷಿಣಿ ಕೂಡ ಸಾಥ್ ನೀಡಿದ್ದಳು ಎನ್ನುವುದಾಗಿಯೂ ಒಪ್ಪಿಕೊಂಡಿದ್ದಾನೆ.

ಒಬ್ಬೊಬ್ಬರನ್ನೇ ಕೊಲೆ ಮಾಡುತ್ತಾ, ಏಳು ಜನರನ್ನು ಕೊಂದ ಬಳಿಕವೂ ಹಂತನಿಗೆ ಸಿಟ್ಟು ಕಡಿಮೆಯಾಗದೇ ಮೃತದೇಹಗಳಿದ್ದ ಮೇಲೆ ಕಲ್ಲು ಎತ್ತಾಕಿ ವಿಕೃತಿ ಮೆರೆದಿದ್ದ. ಅಲ್ಲದೇ ಗುರುತು ಸಿಗದಂತೆ ಮುಖಗಳನ್ನು ನಜ್ಜುಗುಜ್ಜು ಮಾಡಿದ್ದ. ಬಳಿಕ ಕೈ, ಕಾಲು ಕಟ್ಟಿ ಚೀಲದಲ್ಲಿ ತುಂಬಿ ಮೃತದೇಹಗಳನ್ನ ಬಿಸಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅರ್ಜುನ್ @ ಇಂದುಶೇಖರ್ ಹಾಗೂ ಎ2 ಆರೋಪಿಯಾಗಿ ಮಗಳು ಹರ್ಷಿಣಿಯನ್ನು ಪರಿಗಣಿಸಿದ್ದಾರೆ.


Spread the love

About Laxminews 24x7

Check Also

3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!

Spread the love ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ