Breaking News

ಸಿಎಂ ಡಿ.ಕೆ ಶಿವಕುಮಾರ್‌ ಈಗ ಬೆಲೆ ಏರಿಕೆ ದೊರೆ: ಅರವಿಂದ ಬೆಲ್ಲದ್

Spread the love

ಧಾರವಾಡ: ರಿಯಲ್ ಎಸ್ಟೇಟ್ ಸಿಎಂ ಎಂದೇ ಹೆಸರು ಮಾಡಿದ ಮುಖ್ಯಮಂತ್ರಿ ಡಿ.ಕೆ ಶಿವಾಕುಮಾರ್‌  ಅವರಿಗೆ ಬೆಲೆ ಏರಿಕೆ ದೊರೆ ಎಂಬ ಮತ್ತೊಂದು ಗರಿ ಮೂಡಿದೆ ಎಂದು ಶಾಸಕ ಅರವಿಂದ ಬೆಲ್ಲದ್ ವ್ಯಂಗ್ಯವಾಡಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು ಸಿಎಂ ಆದ ಮೇಲೆ ಸಿದ್ದರಾಮಯ್ಯನವರ ಹಾದಿಯಲ್ಲೇ ಬೆಲೆ ಏರಿಕೆ ಮಾಡುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ದರ, ಹಾಲಿನ ದರ,‌ ನೀರಿನ ದರ ಏರಿಸಿದ್ದರು. ಇವತ್ತು‌ ಡಿಕೆಶಿ ಅವರು ಸಿಎಂ ಆದ ಮೇಲೆ ಮತ್ತೇ ಬೆಲೆ ಏರಿಕೆ ಮಾಡಿದ್ದಾರೆ. ಸಾರಿಗೆ ಬಿಎಂಟಿಸಿಯಲ್ಲಿ ಶೇ.42 ರಷ್ಟು ಬೆಲೆ ಏರಿಸಿದ್ದಾರೆ. ಸಾಮಾನ್ಯ ಜನ, ಬಡ ಕೂಲಿಕಾರರು ಬಳಸುವ ಈ ಸಾರಿಗೆಯ ದರವನ್ನು ಏಕಾಏಕಿ ಏರಿಸಿದರೆ ಏನು‌ ಮಾಡಬೇಕು? ಅದೇ ರೀತಿ ಹಾಲಿನ ದರ,‌ ತುಪ್ಪದ ದರ ಹಾಲಿಗೆ ಸಂಬಂಧಿಸಿದ ಉತ್ಪನ್ನಗಳ ದರ‌ ಏರಿಕೆಯಾಗಿವೆ. ಇನ್ನು ನಾಲ್ಕು ದಿನಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ದರ ಕೂಡ ಏರಿಕೆ ಆಗಲಿದೆ ಎಂಬ ಮಾಹಿತಿ ಇದೆ. ಈ ರೀತಿ ದರ ಏರಿಕೆ ಬಿಟ್ಟರೆ ಬೇರೆ ಏನು ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವ್ಯಾಪಾರ ಮಾಡುತ್ತ ಈಗಲೂ ದುಡ್ಡು ಮಾಡುವ ಕಡೆ ಲಕ್ಷ್ಯ ವಹಿಸುತ್ತಿದೆ. ಇವರಿಗೆ ಸಾಮಾನ್ಯ‌ ಜನರ ಬಗ್ಗೆ ಕಾಳಜಿ ಇಲ್ಲ. ಜನರು ರೋಸಿ ಹೋಗಿದ್ದಾರೆ. ಈ ಸರ್ಕಾರಕ್ಕೆ ಜನ ಬುದ್ಧಿ ಕಲಿಸುತ್ತಾರೆ ಎಂಬ ಭರವಸೆ ಇದೆ. ಈಗಾಗಲೇ ಸರ್ಕಾರ ಎರಡು ತಿಂಗಳ ಗೃಹ ಲಕ್ಷ್ಮೀ ಹಣ ಕೊಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

ವಿಧವಾ ವೇತನ, ವೃದ್ಧಾಪ್ಯ ವೇತನ ಕೊಡಲ್ಲ‌ ಎಂದೂ ಹೇಳಿದ್ದಾರೆ. ಅಂಗವಿಕಲ ವೇತನ, ವೃದ್ಧಾಪ್ಯ ವೇತನದ ಹಣ ಬಿಡುಗಡೆ ಮಾಡುತ್ತಿಲ್ಲ. ಬಡ ವಿದ್ಯಾರ್ಥಿಗಳ‌ ಹಾಸ್ಟೆಲ್ ಹಣ ಕೊಡುತ್ತಿಲ್ಲ, ಬಸ್ ಓಡಾಟಕ್ಕೆ ಡಿಸೇಲ್ ಹಣ ಕೊಡುತ್ತಿಲ್ಲ. ಬರೀ ದುಡ್ಡು ಹೊಡಿಯುವ ಕೆಲಸ ಮಾಡುತ್ತಿದ್ದಾರೆ. ಕೆಎಂಎಫ್ ಎಲ್ಲ ಕಡೆ ಇವೆ. ಈ ಕೆಎಂಎಫ್‌ಗಳಲ್ಲಿ ಆಡಳಿತದ ಕಾಸ್ಟ್ ಬೇರೆ ಬೇರೆ ಇದೆ. ಈ ಖರ್ಚು ಕಡಿಮೆ ಮಾಡಲಿ, ಯಾಕೆ ಅದು ಹೆಚ್ಚು ಆಗಿದೆ ಅನ್ನೋದನ್ನು ನೋಡಬೇಕು. ಬೇರೆ ಬೇರೆ ಕಡೆ ಬೇರೆ ಬೇರೆ ಆಡಳಿತಾತ್ಮಕ ವೆಚ್ಚ ಇದೆ. ಅದನ್ನ ಕಡಿಮೆ ಮಾಡುವುದನ್ನು ಬಿಟ್ಟು ಸಿಎಂ‌ ಬೆಲೆ ಏರಿಕೆ‌ ಮಾಡುತ್ತ ಕುಳಿತಿದ್ದಾರೆ. ಪಕ್ಕದ ತಮಿಳುನಾಡಿನಲ್ಲಿ ಬಸ್ ದರ ಏನಿದೆ ಎಂದು ನೋಡಿ ಹೇಳಲಿ. ಸುಮ್ಮನೆ ಏನೋ ಒಂದು ಹೇಳುವುದಲ್ಲ ಎಂದರು

ಹೆಚ್‌ಡಿಕೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಟಾಕ್ ವಾರ್‌ ವಿಚಾರವಾಗಿ ಮಾತನಾಡಿದ ಬೆಲ್ಲದ್, ರಾಜಕಾರಣದಲ್ಲಿ ನಮ್ಮ ತತ್ವ ಸಿದ್ಧಾಂತ ಬೇರೆ ಬೇರೆ ಇದ್ದರೂ ಕೂಡ ನಮ್ಮ ಸಮಾಜ ನಮ್ಮ ಗೆಳೆಯರು ಏನು ಕಲಿಸಿದ್ದಾರೆ ಅದಕ್ಕೆ‌ ಹಿರಿಯರಿಗೆ ಗೌರವ ಕೊಡಬೇಕು. ಕುಮಾರಸ್ವಾಮಿ ಅವರಿಗೆ ಪ್ರಿಯಾಂಕ್ ಖರ್ಗೆ ಅವರಷ್ಟು ದೊಡ್ಡ ಮಗ ಇದ್ದಾನೆ. ಕುಮಾರಸ್ವಾಮಿ ಅವರಿಗೆ ಅವರು ಗೌರವದಿಂದ ಮಾತನಾಡಬೇಕು. ರಾಜಕೀಯ ಬೇರೆ ವಿಚಾರ ಇರಲಿ, ರಾಜಕೀಯ ವಿರೋಧಿಯೇ ಅವರು ಇರಲಿ. ಆದರೆ, ಹಿರಿಯರಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಟ್ಟು ಮಾತಾಡಬೇಕು. ಪ್ರಿಯಾಂಕ್ ಖರ್ಗೆ ಅವರಿಗೆ‌ ಇನ್ನೂ ಸಣ್ಣ ವಯಸ್ಸು, ‌ಇದು ಅವರಿಗೆ ಶೋಭೆ ತರುವುದಲ್ಲ ಎಂದರು.


Spread the love

About Laxminews 24x7

Check Also

3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!

Spread the love ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ