Breaking News

7 ಜನರ ಕೊಲೆಗೆ ಅಪ್ರಾಪ್ತ ಮಗಳ ಸಾಥ್‌ – ಹಂತಕನಿಂದ ಜಸ್ಟ್‌ಮಿಸ್‌ ಆದ ಬಾಲಕ ಹೇಳಿದ್ದೇನು?

Spread the love

ಬೆಂಗಳೂರು: ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಕೊಲೆಗೈದ ಹಂತಕನ ಟ್ರೇಸಿಂಗ್‌ ವೇಳೆ ಕಾರಿನಲ್ಲಿ ಸಿಕ್ಕ ಬಾಲಕ, ಆರೋಪಿಯ ಮರ್ಡರ್‌ ಪ್ಲ್ಯಾನ್‌ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಏಳು ಜನರ ಮರ್ಡರ್ ಮಾಡಿರುವ ಆರೋಪಿ ಇಂದುಶೇಖರ್‌, ಹೆಂಡತಿ ಬೈಯುತ್ತಿದ್ದಳು, ಗಲಾಟೆ ಮಾಡುತ್ತಿದ್ದಳು ಎಂಬ ಸಿಟ್ಟಿಗೆ ಪತ್ನಿ ಜೊತೆ ಅತ್ತೆ, ಪತ್ನಿಯ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆ ಹಾಗೂ 7 ವರ್ಷದ ಮಗನ ಕೊಲೆ ಮಾಡಿದ್ದಾನೆ.

ಗಂಡ ಹೆಂಡತಿ ಜಗಳದ ವೇಳೆ ಪತ್ನಿಯ ಕುಟುಂಬಸ್ಥರೇ ತನ್ನ ನೆಮ್ಮದಿಯ ಬದುಕಿಗೆ ಕಂಟಕವಾಗಿದ್ದಾರೆ ಎಂದು ದ್ವೇಷ ಬೆಳೆಸಿಕೊಂಡ ಆತ, ಎಲ್ಲರನ್ನೂ ಹತ್ಯೆ ಮಾಡಲು ಸಂಚು ರೂಪಿಸಿ ಈ ದುಷ್ಕೃತ್ಯ ಎಸಗಿದ್ದಾನೆ. ಹಂತಕನಿಗೆ ಆತನ ಮಗಳು 17 ವರ್ಷದ ಹುಡುಗಿ ಕೂಡ ಕೊಲೆಗೆ ಸಾಥ್‌ ನೀಡಿದ್ದಾಳೆ

ಈ ಎಲ್ಲ ಸಂದರ್ಭದಲ್ಲೂ ಸುನಿತಾಳ ಅಣ್ಣನ ಮಗ ಹಂತಕನ ಜೊತೆಯೇ ಇದ್ದ. ಹಂತಕನಿಂದ ಜಸ್ಟ್‌ಮಿಸ್‌ ಆದ 13 ವರ್ಷದ ಬಾಲಕ ಮೃತ ದೇಹಗಳನ್ನು ಮೂಟೆಯಲ್ಲಿ ಕಟ್ಟಿ ಬಿಸಾಡಿರುವ ಬಗ್ಗೆ ಹೇಳಿದ್ದಾನೆ.

ಘಟನೆ ಕುರಿತು ಮಾತನಾಡಿದ ಬಾಲಕ, ನನನ್ನು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶೃಂಗೇರಿ ಏರ್‌ಪೋರ್ಟ್‌ ಅಲ್ಲೆಲ್ಲ ಕರೆದುಕೊಂಡು ಹೋಗಿದ್ದರು. 5-6 ದಿವಸದಿಂದ ಅವರ ಜೊತೆ ನಾನು ಇದ್ದೆ. ನನ್ನ ಜೊತೆ ನನ್ನ ಅಕ್ಕ ಕೂಡ ಇದ್ದಳು ಎಂದಿದ್ದಾನೆ.

ಡೆಡ್‌ಬಾಡಿ ಬಗ್ಗೆ ಡೀಟೇಲ್‌
ಗೋಣಿ ಚೀಲದಲ್ಲಿ ಏನನ್ನೂ ಮುಚ್ಚಿಟ್ಟಿದ್ದರು. ಮುಟ್ಟಲು ಹೋದರೆ ಬೇಡ ಮುಟ್ಟಬೇಡ ಅಂತಿದ್ದರು. ಕೆಟ್ಟದಾಗಿ ವಾಸನೆ ಬರ್ತಾ ಇತ್ತು. ನಾವು ಕಾರಿನಲ್ಲಿ ಹೋದಾಗ, ನಾನು ಡಿಕ್ಕಿ ಫುಲ್‌ ಓಪನ್‌ ಮಾಡಿದೆ. ಆಗ ಬೈದು ಮುಚ್ಚಿಸಿದ್ದರು. ಗಾಡಿಗಳ್ಯಾವು ಬರದೇ ಇರೋದನ್ನ ನೋಡಿ ಯಾರೂ ಇಲ್ಲದ ಜಾಗದಲ್ಲಿ ಚೀಲ ಎಸೆದರು. ನಾನು ನಾಲ್ಕು ಡೆಡ್‌ಬಾಡಿ ಚೀಲಗಳನ್ನು ಎಸೆಯೋದನ್ನ ಅಷ್ಟೇ ನೋಡಿದ್ದೇನೆ. ನಾನು ನನ್ನ ತಂದೆಯನ್ನ ನೋಡಿದ್ದು ಶುಕ್ರವಾರವಷ್ಟೇ. ಶುಕ್ರವಾರ ರಾತ್ರಿ ಅಮ್ಮ ಅಪ್ಪ ಮನೆಯಲ್ಲೇ ಇದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಅಪ್ಪ ಇರಲಿಲ್ಲ. ಅಪ್ಪನನ್ನ ಹುಡುಕಿಕೊಂಡು ಅಮ್ಮ ಹೊರಗೆ ಹೋದರು ಆಗ ಅವರ ಹಿಂದೆ ನಾ ಹೋದರೆ ನನ್ನ ಅಕ್ಕ ನನ್ನ ತಡೆದಳು. ಎಳೆದುಕೊಂಡು ಒಳಗೆ ಬಂದಳು. ಎಲ್ಲರ ಪೋನ್‌ ಅವರ ಹತ್ರ ಇತ್ತು ಅಪ್ಪ ಮಗಳು ಗುಸು ಗುಸು ಮಾತಾಡುತ್ತಿದ್ದರು ಎಂದು ಹೇಳಿದ್ದಾನೆ.

ತನ್ನ ತಂದೆ ತಾಯಿ ಸತ್ತಿದ್ದಾರೆ ಎನ್ನುವುದು ಸಹ ಆ ಬಾಲಕನಿಗೆ ಗೊತಿಲ್ಲ. ಹಂತಕ ಏಳು ಮೃತ ದೇಹಗಳನ್ನು ಬೇರೆ ಬೇರೆ ಕಡೆ ಬಿಸಾಡಿದ್ದಾನೆ. ಆ ಮೃತ ದೇಹಗಳ ಶೋಧಕಾರ್ಯ ಮುಂದುವರೆದಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.


Spread the love

About Laxminews 24x7

Check Also

ಬೆಂಗ್ಳೂರು ಸರಣಿ ಹತ್ಯೆ ಕೇಸ್ – ನರಹಂತಕ ಇಂದುಶೇಖರ್ 14 ದಿನ ಪೊಲೀಸ್‌ ಕಸ್ಟಡಿಗೆ

Spread the loveಬೆಂಗಳೂರು: ನಗರದಲ್ಲಿ  ನಡೆದ ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ