ಬೀದರ್: 5 ದಿನದಲ್ಲೇ ಸಿಸಿಟಿವಿ ದೃಶ್ಯಗಳ ಮೂಲಕ ಎಸ್ಬಿಐ ಬ್ಯಾಂಕ್ ಎಟಿಎಂ ದರೋಡೆ ಮಾಡಿದ್ದ ಅಂತರ್ ರಾಜ್ಯ ಖದೀಮರನ್ನು ಕೊನೆಗೂ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಅರೆಸ್ಟ್ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಆಧಾರಿಸಿ, ಹೈದ್ರಾಬಾದ್ನ ಶಾಹಿನ್ ನಗರದಲ್ಲಿ ನಾಲ್ಕು ಜನ ಖದೀಮರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಮೂವರು ಹರಿಯಾಣ, ಓರ್ವ ರಾಜಸ್ಥಾನ ಮೂಲದ ಖದೀಮರಾಗಿದ್ದಾರೆ. ಆಸು ಎಂಡಿ ಶೋಹರಬ್ ಖಾನ್, ಆಸೀಪ್ ಚೇತರಖಾನ್, ಅನೀಷ್ ಇಂದ್ರಿಷ್, ರಾಹುಲ್ ಪಾಪುಖಾನ್ ಬಂಧಿತ ದರೋಡೆಕೋರರು ಎಂದು ತಿಳಿದುಬಂದಿದೆ.
ಅ.25ರಂದು ಭಾಲ್ಕಿಯ ಪಟ್ಟಣದ ಹಿರೇಮಠ ಸಂಸ್ಥಾನ ಮಳಿಗೆಯಲ್ಲಿನ ಎಟಿಎಂ ಕಳ್ಳತನ ಮಾಡಿ, ಖದೀಮರು ಪರಾರಿಯಾಗಿದ್ದರು. ಗ್ಯಾಸ್ ಕಟರ್ನಿಂದ ಎಸ್ಬಿಐ ಎಟಿಎಂ ಕಟ್ ಮಾಡಿ, ಬಳಿಕ ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು ಖದೀಮರು ದರೋಡೆ ಮಾಡಿದ್ದರು. ಒಟ್ಟು 23 ಲಕ್ಷ ರೂ.ಗೂ ಅಧಿಕ ಹಣ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದರು.
ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು 12 ಲಕ್ಷ ಹಣ, ಕೃತ್ಯಕ್ಕೆ ಬಳಿಸಿದ ಮಾಸ್ಕ್, ಮೊಬೈಲ್, ಗ್ಲೌಸ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟರ್, ಕಾರು ಸೇರಿದಂತೆ 32 ಲಕ್ಷ ರೂ. ವಸ್ತುಗಳು ಜಪ್ತಿ ಮಾಡಿದ್ದಾರೆ.
ದರೋಡೆಕೋರ ಬಂಧನಕ್ಕೆ ಎಸ್ಪಿ ಒಂದು ಟೀಂ ರಚನೆ ಮಾಡಿದ್ದು, ಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ದರೋಡೆ ಪ್ರಕರಣ ಬೇಧಿಸುವಲ್ಲಿ ಭಾಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Laxmi News 24×7