ಶಿವಂ ಅಸೋಸಿಯೇಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಜಾರಿ ನಿರ್ದೇಶನಾಲಯ- ಇಡಿ ಬಿಗ್ ಶಾಕ್ ನೀಡಿದೆ.
ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಖಾತೆ, ಷೇರು ಹೂಡಿಕೆ, ಕೃಷಿ ಜಮೀನು, ಬಂಗಲೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ರೂ. ವಂಚನೆ ಆಗಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲವಣ್ಣನವರ್ ಅವರ ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಈ ಪೈಕಿ 47 ಬ್ಯಾಂಕ್ ಖಾತೆಗಳಲ್ಲಿದ್ದ 44 ಕೋಟಿ ಹಣ ಸೀಜ್ ಮಾಡಲಾಗಿದೆ. ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದ 367 ಕೋಟಿ, ಬ್ಯಾಂಕ್ ಖಾತೆಯಲ್ಲಿದ್ದ 44 ಕೋಟಿ, ಸ್ಥಿರಾಸ್ತಿಗಳು 13 ಕೋಟಿ, ಷೇರು ಮಾರುಕಟ್ಟೆ 1.31 ಕೋಟಿ ಸೇರಿದಂತೆ ಒಟ್ಟು 427 ಕೋಟಿ ರೂ. ಸೀಜ್ ಮಾಡಲಾಗಿದೆ.
Laxmi News 24×7