Breaking News

ಭಾರತೀಯ ಸೇನೆಗೆ 1.25 ಲಕ್ಷ ಮೆಟ್ರಿಕ್ ಟನ್ ಭಾರತ್ ರೈಸ್ ಮೀಸಲು

Spread the love

ನವದೆಹಲಿ: ಭಾರತೀಯ ಯೋಧರಿಗೆ ಗುಣಮಟ್ಟದ ಅಕ್ಕಿ ಪೂರೈಸುವ ಉದ್ದೇಶದಿಂದ ಕೇಂದ್ರ ಆಹಾರ ಇಲಾಖೆ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿಟ್ಟಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ  ತಿಳಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಭಾರತೀಯ ಸೇನೆಗೆ ಗುಣಮಟ್ಟದ ‘ಭಾರತ್ ರೈಸ್’  ಪೂರೈಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೋಶಿ, ಯೋಧರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲು ಆಹಾರ ಇಲಾಖೆ ಬದ್ಧವಾಗಿದೆ ಎಂದು ಹೇಳಿದರು.

ನಾಫೆಡ್  ಜೊತೆಗಿನ ಸಾಂಸ್ಥಿಕ ವ್ಯವಸ್ಥೆಯ ಮೂಲಕ ಭಾರತೀಯ ಸೇನೆಗೆ ಗುಣಮಟ್ಟದ ಅಕ್ಕಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಯೋಧರಿಗಾಗಿ ಮೀಸಲಿಟ್ಟಿರುವ ಅಕ್ಕಿಯ ಪೂರೈಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

‘ಭಾರತ್ ರೈಸ್’ ಮಾನದಂಡಗಳ ಪ್ರಕಾರ ಅಕ್ಕಿಯಲ್ಲಿ ಒಡೆದ ಕಾಳುಗಳ ಪ್ರಮಾಣ ಗರಿಷ್ಠ ಶೇ.5 ರಷ್ಟು ಇರಲಿದ್ದು, ನಿಗದಿತ ಗುಣಮಟ್ಟದ ಅಕ್ಕಿ ಲಭ್ಯವಾಗುವುದನ್ನು ಖಚಿತಪಡಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಸೇನೆ–ಎಫ್‌ಸಿಐ ನಡುವೆ ತಿಳಿವಳಿಕೆ ಒಪ್ಪಂದ
ಕಾರ್ಯಾಚರಣೆಗಳ ತುರ್ತು ಸಂದರ್ಭಗಳಲ್ಲಿಯೂ ಸೈನಿಕರಿಗೆ ಆಹಾರ ಪೂರೈಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಭಾರತೀಯ ಸೇನೆ ಮತ್ತು ಭಾರತೀಯ ಆಹಾರ ನಿಗಮ  ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.


Spread the love

About Laxminews 24x7

Check Also

ಸೌಜನ್ಯ ಪ್ರಕರಣದಲ್ಲಿ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ – ವಕೀಲ ಅಮೃತೇಶ್ ಗಂಭೀರ ಆರೋಪ

Spread the loveಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್  ವಕೀಲ ಅಮೃತೇಶ್ ಗಂಭೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ