Breaking News

ನೋಡುಗರ ಕಣ್ಮನ ಸೆಳೆಯುತ್ತಿವೆ ಈ ದಸರಾ ಗೊಂಬೆಗಳು

Spread the love

ಚಾಮರಾಜನಗರ: ಗೊಂಬೆ ಕೂರಿಸುವುದು ದಸರಾ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ದಸರಾ ಗೊಂಬೆ ಕೂರಿಸುವ ಆಚರಣೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ನೋಡುಗರ ಕಣ್ಮನ ಸೆಳೆಯುತ್ತಾ ಅತ್ಯಾಕರ್ಷಕವಾಗಿದೆ ಈ ದಸರಾ ಗೊಂಬೆ ಪ್ರದರ್ಶನ.

ಮಹಿಷಾಸುರನನ್ನು ದುರ್ಗಾದೇವಿ ಸಂಹರಿಸಲು ದೇವಾನುದೇವೆತೆಗಳು ತಮ್ಮ ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಾದರು ಎಂಬ ಪುರಾಣವಿದೆ. ದೇವಾನುದೇವತೆಗಳ ಈ ತ್ಯಾಗವನ್ನು ಸ್ಮರಿಸಲು ಗೊಂಬೆ ಕೂರಿಸುವ ಪದ್ದತಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಿಂದಲು ಆಚರಿಸಿಕೊಂಡು ಬರಲಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ದತಿ ರೂಢಿಯಲ್ಲಿತ್ತು. ಕೆಲವು ಮನೆಗಳಲ್ಲಿ ಈಗಲೂ ದಸರಾ ಗೊಂಬೆ ಕೂರಿಸುವ ಅಚರಣೆಯನ್ನು ಅನೂಚಾನವಾಗಿ ನಡೆಸುಕೊಂಡು ಬರಲಾಗುತ್ತಿದೆ. ಕೆಲವರು ತಲೆಮಾರಿನಿಂದ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರುತ್ತಿದ್ದರೆ, ಇತ್ತೀಚಿನ ಪೀಳಿಗೆಯವರು ಸಹ ಈ ಪರಂಪರೆಯನ್ನು ಅನುಸರಿಸುತ್ತಿದ್ದು, ಈ ಆಚರಣೆಯನ್ನು ಜೀವಂತವಾಗಿಟ್ಟಿದ್ದಾರೆ. ಚಾಮರಾಜನಗರದ ಬಹುತೇಕ ಮನೆಗಳಲ್ಲೂ ಕೂಡ ಈ ಪದ್ಧತಿ ಅಳವಡಿಸಿಕೊಂಡು ಬರುತ್ತಿದ್ದಾರೆ.

ಈ ದಸರಾ ಗೊಂಬೆ ಪ್ರದರ್ಶನದಲ್ಲಿ ಪುರಾಣ ಹಾಗೂ ಐತಿಹಾಸಿಕ ಘಟನೆಗಳು, ಸಂಸ್ಕೃತಿ, ಕಲೆ ಅನಾವರಣಗೊಳಿಸುವ ಚಿತ್ರಣಗಳು, ಶ್ರೀನಿವಾಸ ಕಲ್ಯಾಣ, ಕೃಷ್ಣಾವತಾರ, ರಾಮಾಯಣ, ಮಹಾಭಾರತ, ಜಂಬೂಸವಾರಿ ಮೊದಲಾದ ಸಂಗತಿಗಳು ಬಿಂಬಿತವಾಗಿವೆ. ಒಂಬತ್ತು ದಿನಗಳ ಕಾಲ ನಿತ್ಯವೂ ನವದುರ್ಗೆಯಯರನ್ನು ಆರಾಧಿಸಿ ಪೂಜೆ ಸಲ್ಲಿಸುವುದು ಸಹ ಗೂಂಬೆ ಕೂರಿಸುವ ಸಂಸ್ಕೃತಿಯ ಒಂದು ಭಾಗವಾಗಿದೆ.

ಪಟ್ಟದ ಬೊಂಬೆಗಳು ಸೇರಿದಂತೆ ನಾನಾ ಬಗೆಯ ಗೊಂಬೆಗಳು, ಹಿಂದೆ ಬಳಸುತ್ತಿದ್ದ ಹಿತ್ತಾಳೆ, ತಾಮ್ರ, ಪಿಂಗಾಣಿ ವಸ್ತುಗಳು ಗಮನ ಸೆಳೆಯುತ್ತವೆ. ಗೊಂಬೆ ಪ್ರದರ್ಶನದ ವೀಕ್ಷಣೆಗೆ ಬೇರೆ ಬೇರೆ ಊರುಗಳಿಂದ, ಅಕ್ಕಪಕ್ಕದ ಬಡಾವಣೆಗಳಿಂದ ಜನರು ಬರುವುದು ಸಾಮಾನ್ಯವಾಗಿದೆ. ಒಟ್ಟಾರೆ ದಸರಾ ಗೊಂಬೆ ಕೂರಿಸುವ ಸಾಂಸ್ಕೃತಿಕ ಪರಂಪರೆ ಹಳೇ ಮೈಸೂರು ಭಾಗ ಸೇರಿದಂತೆ ಚಾಮರಾಜನಗರದಲ್ಲೂ ಕೂಡ ನಡೆದುಕೊಂಡು ಬರುತ್ತಿದೆ.


Spread the love

About Laxminews 24x7

Check Also

ಸೌಜನ್ಯ ಪ್ರಕರಣದಲ್ಲಿ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ – ವಕೀಲ ಅಮೃತೇಶ್ ಗಂಭೀರ ಆರೋಪ

Spread the loveಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್  ವಕೀಲ ಅಮೃತೇಶ್ ಗಂಭೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ