Breaking News

ಬೆಳಗಾವಿ: ಟೋಲ್ ಪ್ಲಾಜಾ ಏರಿ ಜಿಗಿಯಲು ಯತ್ನಿಸಿದ ರೈತ

Spread the love

ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ನಡುವೆಯೇ, ಹತ್ತರಗಿ ಟೋಲ್ ಪ್ಲಾಜಾ ಬಳಿ ರೈತರೊಬ್ಬರು ಏಕಾಏಕಿ ಮೇಲೇರಲು ಯತ್ನಿಸಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಟೋಲ್ ಪ್ಲಾಜಾ ಮೇಲೆ ಹತ್ತಿದ ರೈತ ಜಿಗಿಯಲು ಮುಂದಾಗುತ್ತಿದ್ದಂತೆ, ಅಲ್ಲಿದ್ದ ಪ್ರತಿಭಟನಾಕಾರರು ತಕ್ಷಣವೇ ಅವರನ್ನು ತಡೆಯಲು ಮುಂದಾದರು.

ರೈತನ ಕಾಲು ಹಿಡಿದು ಕೆಳಗೆ ಬೀಳದಂತೆ ಕಾಪಾಡಲು ಪ್ರತಿಭಟನಾಕಾರರು ಹರಸಾಹಸಪಟ್ಟರು. ಬಳಿಕ ರೈತ ಮುಖಂಡರು ಮಧ್ಯಪ್ರವೇಶಿಸಿ ಮನವೊಲಿಸಿದ ನಂತರ ರೈತ ಕೆಳಗಿಳಿದಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು. ನಂತರ ರೈತ ಮುಖಂಡರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.


Spread the love

About Laxminews 24x7

Check Also

ಸೌಜನ್ಯ ಪ್ರಕರಣದಲ್ಲಿ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ – ವಕೀಲ ಅಮೃತೇಶ್ ಗಂಭೀರ ಆರೋಪ

Spread the loveಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್  ವಕೀಲ ಅಮೃತೇಶ್ ಗಂಭೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ