Breaking News

ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ – ಮತ್ತೆ ಒಂದು ತಿಂಗಳ ಗಡುವು ವಿಸ್ತರಣೆ

Spread the love

ಬೆಂಗಳೂರು: ಗೃಹಜ್ಯೋತಿ  ಫಲಾನುಭವಿಗಳ ಪರಿಶೀಲನೆಗೆ ಮತ್ತೆ ಒಂದು ತಿಂಗಳ ಗಡುವು ವಿಸ್ತರಣೆ ಮಾಡಲಾಗಿದ್ದು, ಅ.31ರವರೆಗೆ ಅವಕಾಶ ನೀಡಲಾಗಿದೆ.

ಜುಲೈ 1ರಿಂದ ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆಗೆ ಆರಂಭವಾಗಿತ್ತು. ಮೊದಲಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಮನೆ ಮಾಲೀಕರು ಮತ್ತು ಬಾಡಿಗೆದಾರರ ಹೆಚ್ಚುವರಿ ದಾಖಲೆ ಸಂಗ್ರಹ ಹಿನ್ನೆಲೆ ಗಡುವನ್ನು  ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಕಾಲ ಸಮಯ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಮರುಪರಿಶೀಲನೆಗೆ ಒಟ್ಟು ನಾಲ್ಕು ತಿಂಗಳ ಕಾಲಾವಕಾಶ ನೀಡಿದಂತಾಗಿದೆ.

ಸದ್ಯ ಮನೆ ಮಾಲೀಕರು ಮತ್ತು ಬಾಡಿಗೆದಾರರ ಹೆಚ್ಚುವರಿ ದಾಖಲೆ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡುತ್ತಿದ್ದು,ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಫಲಾನುಭವಿಗಳ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ವಿವರ, ಅರ್ಜಿದಾರರ ಭಾವಚಿತ್ರ, ಪ್ರವರ್ಗ, ಆದಾಯ ತೆರಿಗೆ ಪಾವತಿ ಮತ್ತು ವೃತ್ತಿ ಮಾಹಿತಿ ಪರಿಶೀಲನೆ, ಮನೆಗೆ ಬೀಗ, ಮನೆ ಖಾಲಿ, ಮಾಹಿತಿ ಲಭ್ಯವಿಲ್ಲದ ಪ್ರಕರಣಗಳ ಮರುಪರಿಶೀಲನೆ ಮಾಡುತ್ತಿದ್ದಾರೆ.

ಮಾಹಿತಿ ನೀಡಲು ನಿರಾಕರಿಸಿದ ಪ್ರಕರಣಗಳ ಸ್ಥಳ ಪರಿಶೀಲನೆಗೂ ಸೂಚನೆ ನೀಡಲಾಗಿದ್ದು, ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಸ್ಥಾವರಗಳ ಪರಿಶೀಲನೆ ಮಾಡಲಾಗುತ್ತಿದೆ. 

ಜಕಾತಿ ಬದಲಾವಣೆ ಹಾಗೂ ಮೇಲ್ಛಾವಣಿ ಸೌರ ವಿದ್ಯುತ್ ಹೊಂದಿರುವ ಮನೆಗಳ ಮಾಹಿತಿಯೂ ಪರಿಶೀಲನೆಗೆ ಒಳಪಡಲಿದೆ. ಗೃಹಜ್ಯೋತಿ ಯೋಜನೆಯ ಪ್ರಯೋಜನ ಜೀವಂತ ಫಲಾನುಭವಿಗಳಿಗೆ ಮಾತ್ರ ತಲುಪಿಸುವುದು ಸರ್ಕಾರದ ಉದ್ದೇಶವಾಗಿದ್ದು, ಅಕ್ಟೋಬರ್ 31ರೊಳಗೆ ಪರಿಶೀಲನೆ ಮತ್ತು ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ.

ಇನ್ನೂ ಹಿಂದಿನ ಸರ್ಕಾರಿ ಆದೇಶಗಳ ಇತರ ಅಂಶಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿ, ಅಕ್ಟೋಬರ್ 31 ಡೆಡ್‌ಲೈನ್ ನೀಡಿದೆ.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ