Breaking News

ವಸಂತನಗರದ ಹೋಟೆಲ್‌ನಲ್ಲಿ ಸ್ಟಿಂಗ್‌ ಆಪರೇಷನ್ ವ್ಯಕ್ತಿಯನ್ನ ಸಿಎಂ ಭೇಟಿ ಮಾಡಿದ್ರು – ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್

Spread the love

ಬೆಂಗಳೂರು: ವಸಂತನಗರದ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಒಬ್ಬರನ್ನ ಭೇಟಿ ಮಾಡಿದ್ದರು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವ್ಯಕ್ತಿ. ಆ ವ್ಯಕ್ತಿ ಯಾರು ಎಂಬುದನ್ನ ಸಿಎಂ ಹೇಳಬೇಕು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ರಾಜ್ಯದ ಸಿಎಂ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಒತ್ತಾಯಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ್‌ ಅವರ ಸ್ಟಿಂಗ್‌ ಆಪರೇಷನ್‌ ಹೇಳಿಕೆಗೆ ತಿರುಗೇಟು ನೀಡಿದರು.

ವಸಂತ ನಗರದಲ್ಲಿ ಆ ವ್ಯಕ್ತಿಯನ್ನ ಭೇಟಿ ಮಾಡಿದ ಬಳಿಕ ಕ್ಯಾಬಿನೆಟ್‌ಗೆ ಸ್ಟಿಂಗ್ ಆಪರೇಷನ್  ಲಿಸ್ಟ್ ತೆಗೆದುಕೊಂಡು ಹೋಗಿದ್ದಾರೆ. ಉತ್ತರ ಭಾರತದಿಂದ ಬರುತ್ತಿದ್ದಾರೆ, ಕುಮಾರಸ್ವಾಮಿ ಅವರೇ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಸ್ಟಿಂಗ್ ಆಪರೇಷನ್ ಬಗ್ಗೆ ನನಗೆ ಗೊತ್ತಿಲ್ಲ. ಸ್ಟಿಂಗ್ ಆಪರೇಷನ್ ಪಿತಾಮಹ, ಮಹಾನಾಯಕ, ಕಿಂಗ್‌ಪಿನ್, ಸಾಮ್ರಾಟ್ ಎಂದು ಕರೆಯುವ ಸಿಎಂ ಅವರೇ ಪರಿಣಿತರು ಎಂದು ಕುಟುಕಿದರು.

ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ ಉಳಿದಿದೆ
ಸ್ಟಿಂಗ್ ಆಪರೇಷನ್ ವಿಷಯ ಏತಕ್ಕೆ ತಂದರು? ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ ಉಳಿದಿದೆ. ಸಿದ್ದರಾಮಯ್ಯ ಅವರನ್ನೇ ಹೊರಗೆ ತಂದಿದ್ದಾರೆ. ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ? ಏಕೆ ಇನ್ನೂ ತನಿಖೆಗೆ ಕೊಟ್ಟಿಲ್ಲ? ಆ 5 ಜನ ಮಂತ್ರಿಗಳು ಯಾರು? ಅವರು ಟ್ರ್ಯಾಪ್ ಆಗಿದ್ದರೆ ಅವರನ್ನೇಕೆ ಇಟ್ಟುಕೊಂಡಿದ್ದೀರಿ? ತನಿಖೆ ಆಗಲೇಬೇಕು. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳದೇ ಮನೆಗೆ ಕರೆಸಿಕೊಂಡು ಇನ್ನೊಬ್ಬರ ಮೇಲೆ ಸ್ಟಿಂಗ್ ಮಾಡುತ್ತಾರೆ. ಇದು ಸುಮ್ಮನೆ ಬಿಡುವ ವಿಚಾರವಲ್ಲ. ತನಿಖೆ ಆಗಬೇಕು, ದೂರು ಕೊಡಬೇಕು ಅಂದರೆ ಕೊಡಿಸುತ್ತೇವೆ ಎಂದು ತಿರುಗೇಟು ನೀಡಿದರು.

ರಾಜ್ಯದ ಗೌರವ ಹಾಳು ಮಾಡಬೇಡಿ
ಮುಂದುವರಿದು.. ಮುಖ್ಯಮಂತ್ರಿಗಳೇ ರಾಜ್ಯದ ಗೌರವ ಹಾಳು ಮಾಡಬೇಕು ಎಂದುಕೊಂಡಿದ್ದೀರಾ? ಸಿಎಂ ಬದಲಾವಣೆ ಆದ ಬಳಿಕ ಏಕೆ ಇದು ಶುರುವಾಗಿದೆ? ಗೌರವಯುತವಾಗಿ ಅಧಿಕಾರ ನಡೆಸಿದವರ ವಿರುದ್ಧ ಹೀಗೆ ಮಾಡುವುದಾ? ಇದೇನು ತಮಾಷೆಯ ವಿಷಯನಾ? ಪವರ್‌ಫುಲ್ ಸಿಐಡಿ ಅಧಿಕಾರಿಗಳಿದ್ದಾರೆ. ತನಿಖೆಗೆ ಕೊಡಿ. ಏತಕ್ಕೆ ಈ ಮೌನಕ್ಕೆ ಶರಣಾಗಿದ್ದೀರಿ? ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಎಂಬುದು ಸಿಎಂಗೆ ಗೊತ್ತು, ಸಚಿವರಿಗೆ ಗೊತ್ತಿಲ್ಲ ಅಲ್ಲವೇ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ರು.

ಸ್ಟಿಂಗ್ ಲಿಸ್ಟ್ ಕೊಟ್ಟವರು ಯಾರು?
ರಾಜ್ಯವನ್ನು ಹಾಳು ಮಾಡುತ್ತಿದ್ದೀರಿ. ಮುಂದೆ ಹೀಗೆ ಬಿಟ್ಟರೆ ಈ ರಾಜ್ಯದ ಪರಿಸ್ಥಿತಿ ಏನಾಗುತ್ತದೆ? ಸಿಎಂಗೆ ಸ್ಟಿಂಗ್ ಲಿಸ್ಟ್ ಕೊಟ್ಟವರು ಯಾರು? ಯಾವಾಗ ಬಂತು? ಫೈಲ್ ಕೊಟ್ಟ ವ್ಯಕ್ತಿ ಯಾರು? ಅದು ಹೊರಗೆ ಬರಬೇಕು. ರಾಜ್ಯದಲ್ಲಿ ಇಂತಹ ಕೆಟ್ಟ ಪರಂಪರೆ ಸೃಷ್ಟಿ ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ