Breaking News

ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ – ಏಳು ಮಂದಿ ಅರೆಸ್ಟ್‌

Spread the love

ಆನೇಕಲ್‌: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್‌ ಡೀಲಿಂಗ್‌ ನಡೆಸುತ್ತಿದ್ದ ಗ್ಯಾಂಗನ್ನ ಆನೇಕಲ್‌ ಪೊಲೀಸರು  ಬೇಟೆಯಾಡಿದ್ದಾರೆ. ಗನ್‌ ಡೀಲಿಂಗ್‌ ನಡೆಸುತ್ತಿದ್ದ 7 ಆರೋಪಿಗಳನ್ನ ಆನೇಕಲ್‌ ಪೊಲೀಸರು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಬಂಧಿಸಿದ 7 ಮಂದಿ ಪೈಕಿ 6 ಮಂದಿ ನಟೋರಿಯಸ್‌ ರೌಡಿ ಶೀಟರ್‌ಗಳಾಗಿದ್ದಾರೆ. ಬಂಧಿತರನ್ನ ಪ್ರದೀಪ್ ರಮೇಶ್, ಮನೋಜ್ @ ಜಾಕಿ, ರಿಜ್ವಾನ್ ಪಾಷ @ ಕುಳ್ಳ ರಿಜ್ವಾನ್, ನಂಜಪ್ಪ @ ಡೆಡ್ಲಿ ನಂಜ, ವೆಂಕಟರಾಜು @ ತುಕಡಿ, ಗೋಪಿ @ ಸುಣವಾರ ಗೋಪಿ, ಶಿವರಾಜ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಐದು ಕಂಟ್ರಿ ಮೇಡ್‌ ಪಿಸ್ತೂಲ್, ಹತ್ತು ಗುಂಡುಗಳನ್ನ ಜಪ್ತಿ ಮಾಡಲಾಗಿದೆ. ಈ ಅಕ್ರಮದ ಹಿಂದೆ ಪ್ರಭಾವಿ ರಾಜಕಾರಣಿಗಳು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳೂ ಇರುವ ಶಂಕೆ ವ್ಯಕ್ತವಾಗಿದೆ.

ಗನ್‌ ಡೀಲಿಂಗ್‌ ಬಯಲಾಗಿದ್ದು ಹೇಗೆ?
ಕಳೆದ ತಿಂಗಳು 14ನೇ ತಾರೀಖಿನಂದು ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು. ಆನೇಕಲ್‌ ಸಮೀಪದ ಹಾಲ್ದೇನಹಳ್ಳಿ ರೈಲ್ವೇ ಹೇಟ್‌ ಬಳಿ ಅನುಮಾನಾಸ್ಪದವಾಗಿ ಬ್ಯಾಗ್‌ನೊಂದಿಗೆ ನಿಂತಿದ್ದ‌ ಆರೋಪಿಗಳನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ತಡೆದು ಪರಿಶೀಲಿಸಿದಾಗ ಮೂರು ಕಂಟ್ರಿ ಮೇಡ್‌ ಪಿಸ್ತೂಲ್‌ ಹಾಗೂ 10 ಗುಂಡುಗಳು ಪತ್ತೆಯಾಗಿದ್ದವು. ಆರೋಪಿಯನ್ನ ವಸಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಗನ್‌ ಡೀಲಿಂಗ್‌ ಮಾರಾಟ ದಂಧೆ ಬಯಲಿಗೆ ಬಂದಿದೆ.

ಮಧ್ಯಪ್ರದೇಶದ ದಾವೂದ್‌ ಪ್ರಕರಣದ ಕಿಂಗ್‌ ಪಿನ್‌
ಇನ್ನೂ ತನಿಖೆ ವೇಳೆ ಮಧ್ಯಪ್ರದೇಶದ ಬೇಡ ಘಾಟ್‌ ಗ್ರಾಮದ ದಾವೂದ್‌ ದಂಧೆಯ ಕಿಂಗ್‌ಪಿನ್‌ ಎಂದು ತಿಳಿದುಬಂದಿದೆ. ದಾವೂದ್‌, ಪ್ರದೀಪ್‌ ರಮೇಶ್‌ ಮೂಲಕ ಟ್ರೈನ್‌ನಲ್ಲಿ ಆನೇಕಲ್‌ಗೆ ಗನ್‌ ಕಳುಹಿಸಿದ್ದ. ಇತ್ತ ಆನೇಕಲ್‌ಗೆ ಗನ್‌ ತಂದಿದ್ದ ಪ್ರದೀಪ್‌ ರಮೇಶ್‌ ಡೆಲಿವರಿ ಮಾಡಲು ಕಾಯುತ್ತಿದ್ದ ಈ ವೇಳೆ ಖಾಕಿ ಕೈಗೆ ಲಾಕ್‌ ಆಗಿದ್ದಾನೆ.

ತನಿಖೆ ವೇಳೆ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಕೆಜಿ ಹಳ್ಳಿಯ ರೌಡಿ ಶೀಟರ್ ಕುಳ್ಳ ರಿಜ್ವಾನ್ ಹಾಗೂ ಕುಖ್ಯಾತ ರೌಡಿ ಶೀಟರ್ ಮನೋಜ್ @ ಜಾಕಿಗೆ ತಲಾ ಒಂದೊಂದು ಪಿಸ್ತೂಲ್‌ ಮಾರಾಟ ಮಾಡಿರೋದು ಗೊತ್ತಾಗಿದೆ. ತನಿಖೆ ಕೈಗೊಂಡ ಪೊಲೀಸರು ಅವರ ಬಳಿಯಿದ್ದ ಗನ್‌ಗಳನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಪ್ರಾಥಮಿಕವಾಗಿ 7 ಮಂದಿ ಆರೋಪಿಗಳನ್ನ ಬಂಧಿಸಲಾಗಿದ್ದು, ಗನ್ ಸಪ್ಲೇಯರ್ ಜೊತೆಗೆ ಸಂಪರ್ಕ ಹೊಂದಿದ್ದ ಉಳಿದ ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

Spread the loveಮಂಡ್ಯ: ಲೇಡಿ ಪಿಎಸ್‌ಐಗೆ  ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್‌ಗೌಡ  ಪುತ್ರಿ ಐಶ್ವರ್ಯ ಪಿಎಸ್‌ಐ ಸವಿತಾ ಪಾಟೀಲ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ