ಭುವನೇಶ್ವರ: ಒಡಿಶಾದ ರೂರ್ಕೆಲಾ ಸರ್ಕ್ಯೂಟ್ ಹೌಸ್ನಲ್ಲಿ (ಸರ್ಕಾರಿ ಅತಿಥಿ ಗೃಹದಲ್ಲಿ) ನೀಲಿ ಚಿತ್ರ ತಾರೆ ಟೀನಾ ನಂದಿ ವಾಸ್ತವ್ಯ ಹೂಡಿದ್ದ ವಿಡಿಯೋವೊಂದು ಸೋಷಿಯಲ್ ಹರಿದಾಡುತ್ತಿದೆ. ಇದು ವಿವಾದಕ್ಕೂ ಕಾರಣವಾಗಿದೆ.
ಕಳೆದ ವರ್ಷದ ಡಿಸೆಂಬರ್ 1ರಂದು ರೂರ್ಕೆಲಾಕ್ಕೆ ಭೇಟಿ ನೀಡಿದ್ದ ವೇಳೆ ಸರ್ಕ್ಯೂಟ್ ಹೌಸ್ನಲ್ಲಿ ತಂಗಿದ್ದ ಟೀನಾ, ತಮಗೆ ವಿಶೇಷ ಆತಿಥ್ಯ ದೊರೆತಿತ್ತು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಇದೀಗ ಸರ್ಕಾರಿ ವಸತಿ ಸೌಲಭ್ಯವನ್ನ ಅವರಿಗೆ ಹೇಗೆ ಒದಗಿಸಲಾಯಿತು? ನಿಗದಿತ ನಿಯಮಗಳನ್ನ ಪಾಲಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವರದಿಗಳ ಪ್ರಕಾರ, ವಸತಿ ವ್ಯವಸ್ಥೆಗೆ ಸಂಬಂಧಿಸಿದಂತೆ ನಿವೃತ್ತ ಎಸ್ಪಿ ಹುದ್ದೆಯ ಅಧಿಕಾರಿಯ ಪುತ್ರ ಸೇರಿದಂತೆ ಕನಿಷ್ಠ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸರ್ಕಾರಿ ಅತಿಥಿ ಗೃಹ ನೀಡಲು ಯಾರು ಶಿಫಾರಸು ಮಾಡಿದ್ದರು ಹಾಗೂ ಅಗತ್ಯ ಅನುಮತಿ ಪಡೆಯಲಾಗಿತ್ತೇ ಎಂಬುದನ್ನೂ ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಟೀನಾ ನಂದಿ ಜಾರ್ಸುಗುಡಾ ವಿಮಾನ ನಿಲ್ದಾಣದಿಂದ ರೂರ್ಕೆಲಾಕ್ಕೆ ಐಷಾರಾಮಿ ಆಡಿ ಕಾರಿನಲ್ಲಿ ಪ್ರಯಾಣಿಸಿದ್ದರು. ರೂರ್ಕೆಲಾದ ಖಾಸಗಿ ಕಂಪನಿಯೊಂದರ ಸಿಇಒ ತಮ್ಮನ್ನ ರಿಸೀವ್ ಮಾಡಲು ಬರುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದರು. ಕಂಪನಿಯ ಪ್ರಚಾರ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದಾಗಿ ರೀಲ್ಸ್ನಲ್ಲಿ ಹೇಳಿದ್ದರು.
ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸ್ಥಳೀಯ ಟ್ರಾವೆಲ್ ಆಪರೇಟರ್ವೊಬ್ಬರು ಖಾಸಗಿ ಕಂಪನಿಯ ಹಿರಿಯ ಅಧಿಕಾರಿಯ ಮನವಿಯ ಮೇರೆಗೆ ಕಾರು ಒದಗಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟೀನಾ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆಯ ನಡುವೆ ಯಾವುದೇ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಸಾಮಾನ್ಯವಾಗಿ ಹಿರಿಯ ಸರ್ಕಾರಿ ಅಧಿಕಾರಿಗಳು, ಸಚಿವರು, ಶಾಸಕರು, ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಇತರ ಗಣ್ಯರು ವಾಸ್ತವ್ಯ ಹೂಡಲು ಅವಕಾಶವಿದೆ. ನಿಯಮದಂತೆ ಸಂಬಂಧಿತ ಅಧಿಕಾರಿಗಳ ಅನುಮತಿ ಇದ್ದರಷ್ಟೇ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದ್ರೆ ಟೀನಾ ನೀಲಿ ತಾರೆಯಾಗಿದ್ದು ನಿಯಮಗಳನ್ನು ಪಾಲಿಸಲಾಗಿತ್ತೇ ಅನ್ನೋದು ತನಿಖೆಗೆ ಕಾರಣವಾಗಿದೆ.
ಇದೇ ಸರ್ಕ್ಯೂಟ್ ಹೌಸ್ಗೆ ಸಂಬಂಧಿಸಿದ ಮತ್ತೊಂದು ಘಟನೆ ಆಗಸ್ಟ್ನಲ್ಲಿ ನಡೆದಿತ್ತು. ಪೊಲೀಸರು 7 ಮಂದಿಯನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದರು. ಬಂಧಿತರಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಓರಂ ಅವರೊಂದಿಗೆ ಸಂಪರ್ಕ ಹೊಂದಿದ್ದ ಬಿಜೆಪಿ ಯುವ ಮುಖಂಡ ಪ್ರಕಾಶ್ ಪಾಸ್ವಾನ್ ಕೂಡ ಇದ್ದರು. ಬಳಿಕ ಬಿಜೆಪಿ ಪಾಸ್ವಾನ್ ಅವರನ್ನು ಅಮಾನತುಗೊಳಿಸಿತ್ತು.
Laxmi News 24×7