ದಾವಣಗೆರೆ: ಮಹಿಳೆಯೊಬ್ಬಳು ಕುಡಿದ ಮತ್ತಲ್ಲಿ ಸೀರೆಯಲ್ಲಿ ಕತ್ತು ಬಿಗಿದು ಪ್ರಿಯಕರನನ್ನು ಹತ್ಯೆಗೈದ ಘಟನೆ ದಾವಣಗೆರೆ ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ.
ಮಂಜಪ್ಪ (40) ಕೊಲೆಯಾದ ದುರ್ದೈವಿ. ಶಬೀನಾ (38) ಕೊಲೆಗೈದ ಆರೋಪಿ. ಮದ್ಯ ಸೇವಿಸಿದ ಅಮಲಿನಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.
ಮಂಜಪ್ಪ ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದ. ಕಳೆದ 6 ವರ್ಷಗಳಿಂದ ವಿಚ್ಛೇದಿತ ಮಹಿಳೆ ಶಬೀನಾ ಜೊತೆಗೆ ವಾಸವಾಗಿದ್ದ. ಹದಡಿ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
Laxmi News 24×7