ಬೆಂಗಳೂರು: ಜನಾರ್ದನ ರೆಡ್ಡಿಗೆ ವಂದೇ ಮಾತರಂ 2 ಪ್ಯಾರಾನಾದ್ರೂ ಹಾಡೋಕೆ ಬರುತ್ತಾ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಹರಿಪ್ರಸಾದ್ ಹುಚ್ಚʼ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಹುಚ್ಚರಿಗೆಲ್ಲ ನಾನು ಉತ್ತರ ಕೊಡಲ್ಲ. ವಂದೇ ಮಾತರಂ ಅವರಿಗೆ ಎರಡು ಪ್ಯಾರಾ ಆದ್ರೂ ಹೇಳೋಕೆ ಬರುತ್ತಾ ಕೇಳಿ. ಗಣಿ ಕಳ್ಳ ಸರ್ಕಾರದ ಗಣಿ ಲೂಟಿ ಮಾಡಿ ಜೈಲಲ್ಲಿ ಇದ್ದವನಲ್ಲ ನಾನು. ರಾಜಕೀಯ ಹೋರಾಟ ಮಾಡಿಕೊಂಡು ಬಂದಿರುವವನು. ಇವರಿಗೆಲ್ಲ ಉತ್ತರ ಕೊಡಲು ಹೋಗಲ್ಲ. ಇವರು ಅಷ್ಟು ದೇಶಭಕ್ತಿ ದೇಶಪ್ರೇಮಿಗಳಾದರೆ ಖಾಕಿ ಚಡ್ಡಿ ಕರಿ ಟೋಪಿ ಹಾಕಿಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹೇಳುವುದಕ್ಕೆ ಹೇಳಿ. ಇವರಿಗೆಲ್ಲ ಉತ್ತರ ಕೊಟ್ರೆ ನಾವೂ ಹುಚ್ಚರಾಗ್ತೀವಿ ಅಂತ ರೆಡ್ಡಿ ವಿರುದ್ಧ ಕಿಡಿಕಾರಿದರು.
ಶೀಘ್ರವೇ ಪೊಲಿಟಿಕಲ್ ಅಫೇರ್ಸ್ ಕಮಿಟಿ
ಅಲ್ಲದೇ ಸರ್ಕಾರ- ಪಕ್ಷದ ನಡುವೆ ಸಮನ್ವಯಕ್ಕಾಗಿ ಪೊಲಿಟಿಕಲ್ ಅಫೇರ್ಸ್ ಕಮಿಟಿ ಶೀಘ್ರವೇ ಮಾಡೋದಾಗಿ ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಪೊಲಿಟಿಕಲ್ ಅಫೇರ್ಸ್ ಕಮಿಟಿ ಎಲ್ಲಾ ರಾಜ್ಯದಲ್ಲೂ ಇದೆ. ಕರ್ನಾಟಕ ರಾಜ್ಯದಲ್ಲೂ ಸಹ ಸದ್ಯದಲ್ಲೇ ಮಾಡ್ತೀವಿ. ಮೊನ್ನೆ ಬಂದಿದ್ದ ಕೆ.ಸಿ ವೇಣುಗೋಪಾಲ್, ಸುರ್ಜೇವಾಲಾ ಆದಷ್ಟು ಬೇಗ ಪೊಲಿಟಿಕಲ್ ಅಫೇರ್ಸ್ ಕಮಿಟಿ ಮಾಡಬೇಕು ಅಂತ ನಿರ್ದೇಶನ ಕೊಟ್ಟಿದ್ದಾರೆ. ಆ ತಯಾರಿಯಲ್ಲಿ ನಾವು ಇದ್ದೇವೆ. ನಾನು ಈಗಾಗಲೇ ಎಲ್ಲಾ ನಾಯಕರಲ್ಲಿ ಸಲಹೆ ಸೂಚನೆ ಕೇಳಿದ್ದೇನೆ. ಆ ತೀರ್ಮಾನ ತೆಗೆದುಕೊಂಡು ಆದಷ್ಟು ಬೇಗ ಪೊಲಿಟಿಕಲ್ ಅಫೇರ್ಸ್ ಕಮಿಟಿ ಮಾಡುತ್ತೇವೆ ಅಂತ ತಿಳಿಸಿದರು.
Laxmi News 24×7