ಬೆಳಗಾವಿ ಬೆಳಗಾವಿ ನಗರದ ಆದ್ಯಂತ 11 ದಿನಗಳ ಕಾಲ ವಿಘ್ನೇಶ್ವರನಗೆ ಆರಾಧ್ಯ ಪೂಜೆ ನೈವೇದ್ಯ ಮಹಾಪ್ರಸಾದ ಮುಂತಾದ ಕಾರ್ಯಕ್ರಮಗಳನ್ನು ಸಂಭ್ರಮದ ವಾತಾವರಣ ಜರುಗುತ್ತಾ ಇವೆ. ನಗರಾಧ್ಯಂತ ನಡೆಯುತ್ತಿರುವ ಗಣೇಶ್ ಉತ್ಸವ ಮಂಡಲಗಳಿಗೆ ಹಾಗೂ ಗಣೇಶ್ ಪ್ರತಿಷ್ಠಾನ ಗೊಂಡಿರುವ ನಗರಗಳಿಗೆ
ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ್ ಎರಡು ದಿನಗಳಿಂದ ಗಣೇಶ್ ಉತ್ಸವ ಪೆಂಡಾಲ್ ಪ್ರತಿಷ್ಠಾಪನೆಗೊಂಡಿರುವ ಗಣಪತಿ ದರ್ಶನ ಪಡೆದು ಗಣೇಶನ ಕೃಪ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ ಬೆಳಗಾವಿಯ ಉತ್ತರ ಮತಕ್ಷೇತ್ರದ ಗಣೇಶ್ ಉತ್ಸವ ಮಂಡಲಗಳಾದ ಬಕ್ಸೈಡ ರೋಡ್ ,ಭಾರತ್ ನಗರದಲ್ಲಿನ ಗಣೇಶ ಉತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ್ ಅವರ ಜೊತೆಗೆ ಮಹಾನಗರ ಪಾಲಿಕೆ ಸದಸ್ಯ ಸಂದೀಪ್ ಜೇರಿಗೆಹಾಳ ಹಾಗೂ ಸ್ಥಳೀಯ ಮುಖಂಡರುಗಳು ಸಾತ್ ನೀಡಿದರು .
ಮಾಳ್ ಮಾರುತಿ ಬಡಾವಣೆ ರುಕ್ಮಿಣಿ ನಗರ್, ಕಣಬರ್ಗಿ ಕರಿಬಿ ಗಲ್ಲಿ ಕಣಬರ್ಗಿಯ ಸಾಮ್ರಾಟ್ ಗಣೇಶ್ ಉತ್ಸವ ಮಂಡಲ ,ರಾಮ ತೀರ್ಥ್ ನಗರದ ಒಂದನೇ ಕ್ರಾಸ್ ಬಡಾವಣೆ, ರಾಮತೀರ್ಥ ನಗರದ ನವ ನೂತನ ಗಜಾನನ ಮಂಡಲ, ರೇಣುಕಾ ನಗರ ಸುರಭಿ ಹತ್ತಿರದ ಶ್ರೀ ಗಣೇಶ್ ಉತ್ಸವ ಮಂಡಲ ಕಣಬರ್ಗಿ ಜೈ ಶಿವರಾಜ್ ಗಣೇಶೋತ್ಸವ ಮಂಡಳ ಮಠಗಲ್ಲಿ ಮಂಡಳ ಸಿದ್ದೇಶ್ವರ ಕಣಬರ್ಗಿ ಮಂಡಲಗಳಿಗೆ ಭೇಟಿ ನೀಡಿದ್ದರು ಕಣಬರ್ಗಿಯ ಗಣೇಶ್ ಉತ್ಸವ ಮಂಡಳದ ವತಿಯಿಂದ ಏಕಲವ್ಯ ನಗರದಲ್ಲಿ ಏರ್ಪಡಿಸಿದ ಹಾಸ್ಯರಸಮಂಜರಿ ಕಾರ್ಯಕ್ರಮಗಳು ಜರುಗಿದವು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ ಮಾಳಮಾರುತಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಎಸಿಪಿ ಬಿ ಆರ್ ಗಡ್ಡೆಕರ್, ಬೈರೇಗೌಡ ಪಾಟೀಲ್, ಬಾಹುಬಲಿ ವೀರಗೌಡ, ಬಾಲಕೃಷ್ಣ ಪಾಟೀಲ್, ಪ್ರಕಾಶ್ ದೊಡ್ಡಮನಾಯಕ್, ಸಾಯಿನಾಥ ಪಾಟೀಲ್, ಗಂಗಾಧರ್ ಹೊರಗಿನಮನಿ, ಹಾಗೂ ಏಕಲವ್ಯ ಯುವಕ ಮಂಡಲಗಳು ಮಹಿಳಾ ಮಂಡಲಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ್ ಭಕ್ತಾದಿಗಳು ಉಪಸ್ಥಿತರಿದ್ದರು
Laxmi News 24×7