ಶಿವಮೊಗ್ಗ: ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದೆ. ಇದರಿಂದ ಕೋಪಗೊಂಡು ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಒಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಶಾಸಕರು ವೇದಿಕೆ ಮೇಲೆ ಎದ್ದು ನಿಂತು ಆಕ್ರೋಶ ಹೊರಹಾಕಿದ್ದಾರೆ. ಪ್ರಜಾಪ್ರಭುತ್ವ ದೇಶಕ್ಕೊಂದು, ರಾಜ್ಯಕ್ಕೊಂದು ಬೇರೆ ಇದೆಯಾ? ಕೇಂದ್ರದ ಕಾನೂನಿನ ವಿರುದ್ಧ ರಾಜ್ಯ ನಡೆದುಕೊಳ್ಳಲು ಬರಲ್ಲ. ಕಾನೂನು ಗಾಳಿಗೆ ತೂರುತ್ತೀರಾ ಎಂದು ಡಿಸಿಯವರಿಗೆ ಪ್ರಶ್ನಿಸಿದ್ದಾರೆ.
ಈ ವೇಳೆ ಡಿಎಸ್ಎಸ್ ಮುಖಂಡರು, ಕೇಂದ್ರ ಒಂದು, ರಾಜ್ಯ ಒಂದು ಆದೇಶ ಮಾಡಿದ್ರೆ, ಅಧಿಕಾರಿಗಳು ಏನು ಮಾಡ್ತಾರೆ? ನೀವು ಹೇಳ್ತಿರಿ, ಹಾಗೇ ಮಾಡಿದ್ರೆ ಅಧಿಕಾರಿಗಳಿಗೆ ನೋಟಿಸ್ ನೀಡ್ತಾರೆ. ನೀವು ಸರ್ಕಾರಕ್ಕೆ ಹೇಳಿ, ಅಧಿಕಾರಿಗಳಿಗೆ ತೊಂದರೆಯಾಗುತ್ತೇ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ವೇಳೆ, ವಂದೇ ಮಾತರಂಗೆ ಗೌರವ ಕೊಡದೇ ಇರುವ ವೇದಿಕೆಯಲ್ಲಿ ನಾನು ಇರಲ್ಲ. ಪ್ರಜಾಪ್ರಭುತ್ವದಲ್ಲಿ ವಂದೇ ಮಾತರಂ ಹೇಳೋಕೆ ಆಗಲ್ವಾ? ನೀವು ಇರಿ, ನಾನು ಇರಲ್ಲ ಎಂದು ಕಾರ್ಯಕ್ರಮದಿಂದ ಶಾಸಕರು ಹೊರನಡೆದಿದ್ದಾರೆ.
Laxmi News 24×7