ಬೆಂಗಳೂರು: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಈಗ ಬೆಂಗಳೂರಿನಲ್ಲಿ ನಡೆದಿರೋ ಕೊಲೆ ಪ್ರಕರಣವೇ ಸಾಕ್ಷಿಯಾಗಿದೆ.
ಪ್ರಿಯಕರ ಹಾಗೂ ತನ್ನ ತಾಯಿ ಜೊತೆ ಸೇರಿ ಪಾರ್ಶ್ವವಾಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಪತಿಯನ್ನ ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್ ನಲ್ಲಿ ಸೆಪ್ಟೆಂಬರ್ 9 ರಂದು ರಾತ್ರಿ ಘಟನೆ ನಡೆದಿದೆ. ಪರಪುರುಷನೊಂದಿಗೆ ಲವ್ವಿಡವ್ವಿ ಆಡ್ತಿದ್ದ ಮಹಿಳೆ, ಗಂಡನನ್ನ ಕೊಂದು ಬಳಿಕ ಹೃದಯಾಘಾತ ಎಂದು ನಾಟಕವಾಡಿದ್ದಾರೆ. ಆದ್ರೆ ತನಿಖೆ ಬಳಿಕ ನಾಟಕ ಬಯಲಾಗಿದೆ. ಸದ್ಯ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ನಹೀಮ್ ಜೊತೆ ಶಹಿನಾ ಲ್ವವ್ವಿ ಡವ್ವಿ
20 ವರ್ಷಗಳ ಹಿಂದೆಯೇ ಮುಬಾರಕ್ ಎಂಬಾತನೊಂದಿಗೆ ಶಹಿನಾ ಬಾನು ವಿವಾಹವಾಗಿದ್ದಳು. ಆದ್ರೆ ಪತಿ ಮುಬಾರಕ್ ಕಳೆದ 2 ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ. ಇತ್ತ ದಂಪತಿ ಮಗಳೂ ಸಹ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಈ ವೇಳೆ ಶಹಿನಾ ಮಗಳನ್ನ ಗುಣಪಡಿಸೋದಾಗಿ ಮನೆಗೆ ಬಂದಿದ್ದ ನಹೀಮ್ ಉದ್ದೀನ್ ಖುರೇಶಿ ಎಂಬಾತನೊಂದಿಗೆ ಸಲುಗೆ ಬೆಳೆಸಿದ್ದಾಳೆ. ಇಬ್ಬರು ಲವ್ವಿಡವ್ವಿ ಶುರುಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ.
ಪತಿಯನ್ನ ನೋಡಿಕೊಳ್ಳಲಾಗದೇ ಬೇಸತ್ತಿದ್ದ ಶಹಿನಾ ಬಾನುಗೆ ನಹೀಮ್, ಕೊಲೆ ಮಾಡುವ ಐಡಿಯಾ ನೀಡಿದ್ದನಂತೆ. ಅದರಂತೆ ಶಹಿನಾ ಬಾನು ತನ್ನ ತಾಯಿ ಜೊತೆಗೆ ಸೇರಿ ಬುಧವಾರ (ಸೆ.9) ಕೊಲೆಗೆ ಪ್ಲ್ಯಾನ್ ಮಾಡಿದ್ದಾಳೆ. ಪತಿ ಮಲಗಿದ್ದಲ್ಲೆ ಉಸಿರುಗಟ್ಟಿಸಿ, ಖಾಸಗಿ ಭಾಗಕ್ಕೆ ಒದ್ದು ಕೊಲೆ ಮಾಡಿದ್ದಾರೆ. ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ತಾಯಿ ಮಗಳು ಇಬ್ಬರೂ ಹೇಳಿದ್ದಾರೆ.
ಘಟನೆ ತಿಳಿದ ಬಳಿಕ ಸಾವಿನ ಬಗ್ಗೆ ಅನುಮಾನ ಇರೋದಾಗಿ ಮುಬಾರಕ್ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಅಸಹಜ ಸಾವು ಕೇಸ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಸತ್ಯ ಬಯಲಾಗಿದೆ. ಮೃತ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದಾಗಿ, ಜೊತೆಗೆ ಕೆನ್ನೆ, ಮೂಗು, ಕುತ್ತಿಗೆ, ಖಾಸಗಿ ಭಾಗದಲ್ಲಿ ಗಾಯಗಳಾಗಿವೆ ಎಂಬುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಗೊತ್ತಾಗಿದೆ. ಬಳಿಕ ಶಹಿನಾ ಬಾನು, ತಾಯಿ ಹಸೀನ ಜಾನ್ ಹಾಗೂ ಪ್ರಿಯಕರ ನಹೀಮ್‌ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಆವಲಹಳ್ಳಿ ಪೊಲೀಸರು, ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
Laxmi News 24×7