ಬೆಂಗಳೂರು: ಮೋದಿಯವ್ರು ಹೊರಗಡೆ ಹೋಗಿ ಹೂಡಿಕೆ ಮಾಡಿ ಅಂತಾರೆ, ಜಾರಕಿಹೊಳಿ ಅದನ್ನೇ ಮಾಡಿದ್ದಾರೆ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಚಿವ ಸತೀಶ್ ಜಾರಕಿಹೊಳಿ ಅಕ್ರಮ ಹೊಡಿಕೆ ಎಂದು ಇಡಿ (ಜಾರಿ ನಿರ್ದೇಶನಾಲಯ) ಪತ್ರಿಕಾ ಪ್ರಕಟಣೆ ಹೊರಡಿಸಿದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಪ್ರೆಸ್ ನೋಟ್‌ನಲ್ಲಿ, ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ ಅಂತ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಅಂತಾರೆ, ಏನು ಸಾಕ್ಷಿ ಸಿಕ್ಕಿದೆ ಅಂತ ಹೇಳಿಲ್ಲ. ಪ್ರೆಸ್ ನೋಟ್ ನೂರು ನೋಡಿದ್ದೇವೆ. ಇದು ಹೊಸದಾ ಎಂದು ಪ್ರಶ್ನಿಸಿದರು.
ಇಂತಹ 196 ದಾಳಿಗಳು ಆಗಿವೆ ಎಂದು ನಾನು ಅಂಕಿ ಅಂಶ ಕೊಟ್ಟಿದ್ದೆ. ಎರಡು ಕೇಸ್‌ನಲ್ಲಿ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವಾ? ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ ಎಂದು ಅವರು ಪ್ರಶ್ನಿಸಿದರು.
ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎಲ್ಲಾ ಸಾಬೀತು ಮಾಡಬಹುದು. ನಾವು ಎಲ್ಲಿಯೂ ಹೊಡಿಕೆ ಮಾಡಿಲ್ಲ, ಹೊಡಿಕೆ ಮಾಡಬೇಕು ಅಂತ ಇದ್ದೇವೆ ಅಂತ ಹೇಳಿದ್ದಾರೆ, ಅದರಲ್ಲಿ ತಪ್ಪೇನಿದೆ? ಈಗ ಮೋದಿ ಅವ್ರು ಹೇಳ್ತಾರೆ ಭಾರತೀಯರು ಹೋಗಿ ಹೊರಗಡೆ ಬಂಡವಾಳ ಹಾಕಬೇಕು. ಇಲ್ಲಿ ಹೊಡಿಕೆ ಮಾಡಬೇಕು ಅಂತ ಹೇಳ್ತಾರೆ. ಇವ್ರು ಅದನ್ನ ಮಾಡ್ತಾ ಇರೋದು ಅಲ್ವ? ಕಾನೂನು ಬಾಹಿರವಾಗಿ ಹೊಡಿಕೆ ಮಾಡಿದ್ರೆ ಮಾತ್ರ ತಪ್ಪು.
ಏನೇ ಇರಲಿ ಕ್ಲಿಯರ್ ಹೇಳಿಕೆ ನೀಡಿದ್ದಾರೆ. ಕಾಂಗೋದಲ್ಲಿ ಇರಬಹುದು, ಕೆನಡಾದಲ್ಲಿ ಇರಬಹುದು, ಹೂಡಿಕೆ ಮಾಡೋದು ತಪ್ಪಾ? ಅದನ್ನ ಎಲ್ಲೂ ಹೇಳಿಲ್ಲ. ಇವ್ರು ಮಾಡಬೇಕು ಅಂತ ಹೇಳಿದ್ದಾರೆ. ಅವ್ರು ಮಾಡಿದ್ದಾರೆ ಹೂಡಿಕೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇಡಿಯವರು ಕತೆ ಕಟ್ಟುತ್ತಾರೆ. ಇಲ್ಲಿ ಲಂಚ ತೆಗೆದುಕೊಂಡು ಹೊಡಿಕೆ ಮಾಡಿದ್ದಾರೆ ಎಂದಿದ್ದಾರೆ. ಇದಕ್ಕೆ ದಾಖಲೆ ಸಮೇತ ಕೊಡ್ತೀನಿ ನಾನು ಹೊಡಿಕೆ ಮಾಡೋಕೆ ರೆಡಿಯಾಗ್ತಾ ಇದ್ದೆ ಅಂತ ಜಾರಕಿಹೊಳಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
PWD ಇಲಾಖೆಯಲ್ಲಿ ಗುತ್ತಿಗೆ ನೀಡಲು ಲಂಚ ಪಡೆದ ಆರೋಪ ವಿಚಾರವಾಗಿ, ಗಾಳಿ ಸುದ್ದಿಗೆ ನಾನು ಉತ್ತರ ಕೋಡೋಕೆ ಆಗಲ್ಲ. ಇಡಿ ಅವ್ರು ಹೇಳಲಿ, ದಾಖಲೆ ಕೊಡಲಿ. ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ ಆ ಹಣವನ್ನ ಇಲ್ಲಿ ಹೊಡಿಕೆ ಮಾಡಿದ್ದಾರೆ ಅಂತ ದಾಖಲೆ ಕೊಡಲಿ. ಪಾಸ್ ಪೋರ್ಟ್ ತೆಗೆದು ನೋಡಿ ಯಾರು ಯಾರು ಎಲ್ಲಿಗೆ ಹೋಗಿದ್ದಾರೆ ಅಂತ. ನಮ್ಮ ಪಾಸ್ ಪೋರ್ಟ್ ನಾವು ಕೋಡ್ತೀವಿ, ಬಿಜೆಪಿಯವರು ಕೋಡ್ತಾರಾ? ದುಬೈ, ಮಾರಿಷಸ್‌ಗೆ ಎಷ್ಟು ಸಲ ಹೋಗಿ ಬಂದಿದ್ದಾರೆ ಅಂತ ಕೊಡಲಿ ಎಲ್ಲರೂ, ಬಿಜೆಪಿ ಶಾಸಕರು, ಮಾಜಿ ಸಚಿವರು ಎಲ್ಲಾ ಪಾಸ್ ಪೋರ್ಟ್ ಕೊಡಲಿ ಎಲ್ಲಾ ತನಿಖೆ ಆಗಲಿ ಎಂದರು.
ನಮ್ಮ ರಾಜ್ಯದಲ್ಲಿ ಸಿಎಂ ಅವರ ಬಗ್ಗೆ ಎಷ್ಟೆಲ್ಲಾ ಆಪಾದನೆ ಮಾಡಿದ್ರು, ಆಮೇಲೆ ಏನಾಯ್ತು? ನ್ಯಾಯಾಲಯದಲ್ಲಿ ಏನಾಯ್ತು? ಅದಕ್ಕೆ ಬಿಜೆಪಿಯವರು ಕೇಂದ್ರ ಸರ್ಕಾರದವರು ಕ್ಷಮೆ ಕೇಳಿದ್ರಾ? ಮಾನಸಿಕವಾಗಿ ಹಿಂಸೆ ಕೊಟ್ರು ಅಲ್ವ ಸಿಎಂ, ಮತ್ತು ಅವ್ರ ಕುಟುಂಬದವರಿಗೆ, ಇಷ್ಟು ಚಾರಿತ್ರ್ಯ ಹಾಳು ಮಾಡಿದ್ರು, ಅದಕ್ಕೆ ಕ್ಷಮೆ ಕೇಳಿದ್ರಾ?
ಯಾರು ಯಾರು ಅತೀ ಭ್ರಷ್ಟ ರಾಜಕಾರಣಿಗಳು ಇದ್ದಾರೆ ಅಂತ ಬಿಜೆಪಿ ಅವ್ರು ಹೇಳ್ತಾ ಇದ್ರು, ಅವರು ಬಿಜೆಪಿಗೆ ಹೋದ ತಕ್ಷಣವೇ ಗಂಗಾ ಜಲದಿಂದ ಪವಿತ್ರ ಆಗ್ಬಿಟ್ರು ಎಂದು ಇದೇ ವೇಳೆ ವ್ಯಂಗ್ಯವಾಡಿದರು.
Laxmi News 24×7