Breaking News

ವಿದ್ಯುತ್ ತಂತಿ ತಗುಲಿ ಉರುಳಿಬಿದ್ದ ಗಣೇಶ ಮೂರ್ತಿ – ಯುವಕ ಸ್ಥಳದಲ್ಲೇ ಸಾವು

Spread the love

ರಾಯಚೂರು: ಜಿಲ್ಲೆಯ ಸಿರವಾರ  ತಾಲೂಕಿನ ಅತ್ತನೂರು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಪ್ರತಿಷ್ಠಾಪನೆಗಾಗಿ ತರುತ್ತಿದ್ದ ಗಣೇಶ ಮೂರ್ತಿ ಉರುಳಿ ಬಿದ್ದು, ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ.

27 ವರ್ಷದ ಪ್ರೇಮ್ ಕುಮಾರ್ ಮೃತ ದುರ್ದೈವಿ ಯುವಕ. ಗಣೇಶನ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ ವಿದ್ಯುತ್ ತಂತಿ ಗಣೇಶನ ತಲೆ ಭಾಗಕ್ಕೆ ಟಚ್‌ ಆಗಿದೆ. ಪರಿಣಾಮ ಮೂರ್ತಿ ಉರುಳಿಬಿದ್ದಿದೆ. ಮೂರ್ತಿ ಬಿದ್ದ ರಭಸಕ್ಕೆ ತಂತಿ ಕಟ್‌ ಆಗಿ ಲಾರಿಯಲ್ಲಿ ಮಲಗಿದ್ದ ಯುವಕನ ಮೇಲೆ ಬಿದ್ದಿದೆ. ಈ ವೇಳೆ ಯುವಕನಿಗೆ ಕರೆಂಟ್‌ ಶಾಕ್‌ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ವೇಳೆ ಉಳಿದ ಯುವಕರು ಲಾರಿಯಿಂದ ಹೊರಗೆ ಜಿಗಿದು ಪಾರಾಗಿದ್ದಾರೆ. ಆದರೆ ಲಾರಿಯಲ್ಲಿ ಮಲಗಿದ್ದ ಪ್ರೇಮ್ ಕುಮಾರ್ ಸಾವನ್ನಪ್ಪಿದ್ದಾನೆ. 25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತರುತ್ತಿದ್ದ ವೇಳೆ ಈ ಅವಘಡ ನಡೆದಿದೆ.

ಘಟನೆಯಲ್ಲಿ ರಸ್ತೆಗೆ ಉರುಳಿಬಿದ್ದಿದ್ದ ಗಣೇಶ ಮೂರ್ತಿಯನ್ನ ಸದ್ಯ ತೆರವು ಮಾಡಲಾಗಿದೆ. ಸಿರವಾರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ.


Spread the love

About Laxminews 24x7

Check Also

ಕಣಕುಂಬಿಯಲ್ಲಿ ಶ್ರೀ ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವದ 35ನೇ ವರ್ಷದ ‘ಭವ್ಯ ಆಗಮನ’ ಸಂಭ್ರಮ ; ಚನ್ನರಾಜ ಹಟ್ಟಿಹೊಳಿ ಭಾಗಿ

Spread the loveಖಾನಾಪುರ: ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಶ್ರೀ ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವ ಮಂಡಳ ವತಿಯಿಂದ ಆಯೋಜಿಸಲಾಗಿರುವ 35ನೇ ವರ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ