ಬೆಂಗಳೂರು: ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ಟೋಲ್ ಕಟ್ಟಬೇಡಿ ಅಂತ ಪ್ರಚೋದನೆ ಮಾಡೋದು ಸರಿಯಲ್ಲ ಅಂತ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ , ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತಾಡಿದ ಅವರು, ನೈಸ್ ಟೋಲ್ ಕಟ್ಟಬೇಡಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಹೀಗೆ ಹೇಳೋದು ಸರಿಯಲ್ಲ. ಟೋಲ್ ಕಟ್ಟಬೇಡಿ ಅಂತ ಸಾರ್ವಜನಿಕರಿಗೆ ಪ್ರಚೋದನೆ ಕೊಟ್ಟರೆ ಹೇಗೆ? ಏನೇ ಇದ್ದರೂ ಕೋರ್ಟ್ ಇದೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಕ್ರಮ ತೆಗೆದುಕೊಳ್ಳಲಿ. ಏನೇ ಮಾತಾಡಿದ್ರು ಕಾನೂನಾತ್ಮಕವಾಗಿ ಮಾತಾಡಬೇಕು. ಜನರಿಗೆ ಕಾನೂನುಬಾಹಿರ ಕೆಲಸಕ್ಕೆ ಪ್ರಚೋದನೆ ಕೊಡಬಾರದು. ಕೇಂದ್ರ ಸಚಿವರಾಗಿ ಇರೋರು ಹೀಗೆ ಮಾತಾಡೋದು ಸರಿಯಲ್ಲ ಅಂತ ಹೇಳಿದರು.
ಸ್ಥಾನ ಉಳಿಸಿಕೊಳ್ಳೋಕೆ ವಿಜಯೇಂದ್ರ, ಅಶೋಕ್ ಪ್ರತಿಭಟನೆ
ಇದೇ ವೇಳೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಜಯೇಂದ್ರ (Vijayendra) ಮತ್ತು ಅಶೋಕ್ (R Ashok) ತಮ್ಮ ಸ್ಥಾನ ಉಳಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡ್ತಾ ಇದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಅವರು ಪಾದಯಾತ್ರೆ ಮಾಡಲಿ ಯಾರು ಬೇಡ ಅಂದ್ರು. ಹಿಂದೆ ಬಿಡದಿ, ಮುಡಾ ಪಾದಯಾತ್ರೆ ಆಯ್ತು ಈ ರಾಯಚೂರು to ಬಳ್ಳಾರಿ ಅಂತಿದ್ದಾರೆ. ಮಾಡಲಿ ಯಾರು ಬೇಡ ಅಂದ್ರು. ಏನಂತ ಪಾದಯಾತ್ರೆ ಮಾಡ್ತಾರೆ? ಬಿಜೆಪಿ ಅವರು ಶಾಸಕ ಚಂದ್ರು ಲಮಾಣಿ ಅವ್ರನ್ನ ಕೈಬಿಟ್ಟಿದ್ದಾರಾ.?ಮೊನ್ನೆ ಅವ್ರು ಕೂಡ ಘೋಷಣೆ ಕೂಗ್ತಿದ್ರು. ಲೋಕಾಯುಕ್ತ ಟ್ರ್ಯಾಪ್ ಆದವರು ಘೋಷಣೆ ಕೂಗ್ತಿದ್ರು. ಅದನ್ನ ನೋಡಿ ಅಳಬೇಕೋ ನಗಬೇಕಾ ಗೊತ್ತಾಗಿಲ್ಲ ನನಗೆ. ಲೋಕಾಯುಕ್ತದಿಂದ ಟ್ರ್ಯಾಪ್ ಆದವರು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡ್ತಾ ಇದ್ದರು ಅಂತ ಕಿಡಿಕಾರಿದರು.
ನಾಗೇಂದ್ರ ಹೆಸರು ಸಿಐಡಿ, SIT ತನಿಖೆಯಲ್ಲಿ ನಾಗೇಂದ್ರ ಹೆಸರು ಇಲ್ಲ. ಸಿಬಿಐ, ಇಡಿ ಎರಡನೇ FIR ನಲ್ಲಿ ಜಾರ್ಜ್ ಶೀಟ್ ಹಾಕಿರೋದು. ಎಲ್ಲರಿಗೂ ಗೊತ್ತು ಸಿಬಿಐ, ಇಡಿ, ಐಟಿ ಹೇಗೆ ಕೆಲಸ ಮಾಡುತ್ತೆ ಅಂತ. ಸಾಕ್ಷಿ ಎಲ್ಲಿದೆ ನಾಗೇಂದ್ರ ವಿರುದ್ದ ತೋರಿಸಲಿ. ಮಾಧ್ಯಮಗಳ ಮುಂದೆ ಮಾತಾಡಿದ ತಕ್ಷಣ ಸುಳ್ಳು ಸತ್ಯ ಆಗಲ್ಲ ಸತ್ಯ ಸುಳ್ಳು ಆಗಲ್ಲ. ಯಾಕೆ ಸದನದಲ್ಲಿ ಚರ್ಚೆ ಮಾಡುತ್ತಿಲ್ಲ ಅಂತ ವಾಗ್ದಾಳಿ ನಡೆಸಿದರು.
ದೊಡ್ಡ ಅವಕಾಶ ಬಿಜೆಪಿ ಅವರು ಕಳೆದುಕೊಳ್ತಿದ್ದಾರೆ. ಕಾಂಗ್ರೆಸ್, ನಾಗೇಂದ್ರ ಅವರನ್ನು ಎಕ್ಸ್‌ಪೋಸ್ ಮಾಡೊಕೆ ಸುವರ್ಣ ಅವಕಾಶ ಇತ್ತು. ಆದರೆ ಅವರು ಸದನದಲ್ಲಿ ಚರ್ಚೆ ಮಾಡುತ್ತಿಲ್ಲ. ಯಾಕೆಂದರೆ ಅವರ ಬಳಿ ಏನು ಇಲ್ಲ. ಮೊದಲು ದಿನದಿಂದ ಕಪ್ಪು ಪಟ್ಟಿ ಒದರಾಡೋದು, ಚೀರಾಡೋದು ಅಷ್ಟೆ. ಒಂದೇ ಒಂದು ಪೇಪರ್ ಸದನಕ್ಕೆ ಕೊಟ್ಟಿಲ್ಲ. ಅವರ ನಾಯಕತ್ವ ಉಳಿಸಿಕೊಳ್ಳೊಕೆ ಬಿಜೆಪಿ ನಾಯಕರು ಹೋರಾಟ ಮಾಡ್ತಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ಉಳಿಯುವ ಹೋರಾಟ. ವಿಪಕ್ಷದ ನಾಯಕರಾಗಿ ಅಶೋಕ್ ಉಳಿಯುವ ಹೋರಾಟ. ಇವೆರೆಡು ಬಿಟ್ಟು ಬೇರೆ ಉದ್ದೇಶ ಯಾವುದು ಇಲ್ಲ ಎಂದು ಕುಟುಕಿದರು.
Laxmi News 24×7