ಚಾಮರಾಜನಗರ: ಮೂವರ ವಿರುದ್ಧ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಸತ್ಯ ಮಾತ್ರ ಬಯಲಾಗಿಲ್ಲ. ಅರಣ್ಯ ಇಲಾಖೆ ಬೇಟೆಯಾಡಿದ್ದವರ ಹತ್ಯೆ ಮಾಡಿದ್ವಿ ಅಂದ್ರೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದನಗಾಹಿಗಳ ಹತ್ಯೆ ನಡೆಸಲಾಗಿದೆ ಅಂತಿದ್ದಾರೆ. ಇನ್ನೂ ಮೂವರ ಜೊತೆ ಹೋಗಿದ್ದ ಮಹಿಮಾ ದಾಸ್ ಕೂಡ ನಾಪತ್ತೆಯಾಗಿದ್ದಾನೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸುಳಿವು ಕೂಡ ಸಿಕ್ತಿಲ್ಲ.
ಹೌದು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂರು ಜನರ ಶೂಟೌಟ್ ಪ್ರಕರಣ ಸಂಬಂಧ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಬಿಟ್ರೆ ಹಿರಿಯ ಅರಣ್ಯಾಧಿಕಾರಿಗಳಾಗಲಿ ಅಥವಾ ಕಾವೇರಿ ವನ್ಯಧಾಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಳಿವೇ ಇಲ್ಲ. ಅರಣ್ಯಾಧಿಕಾರಿಗಳ ವಿರುದ್ಧ ಮೃತರ ಕುಟುಂಬಸ್ಥರ ಆಕ್ರೋಶ ಮಾತ್ರ ಕಮ್ಮಿಯಾಗ್ತಿಲ್ಲ.
ಶೂಟ್ ಮಾಡಿ ಕೊಂದವರನ್ನು ಎದುರಿಗೆ ತಂದು ನಿಲ್ಲಿಸಿ ಅಂತಾ ಕೆಂಡಾಮಂಡಲರಾಗಿದ್ದರು. ಅಲ್ಲದೇ ಕಳ್ಳಬೇಟೆ ತಡೆ ಶಿಬಿರ ಹಾಗೂ ಅರಣ್ಯಾಧಿಕಾರಿಗಳ ಕಚೇರಿಗಳನ್ನ ಧ್ವಂಸ ಮಾಡಿದ್ದರು. ಈ ಹಿನ್ನಲೆ ಜೀವಕ್ಕೆ ಹಾನಿಯಾಗುವಂತಹ ಘಟನೆ ನಡೆಯುವ ಸಾಧ್ಯತೆ ಹಿನ್ನಲೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸುಳಿವೇ ಇರಲಿಲ್ಲ. ಅಲ್ಲದೇ ಕಾವೇರಿ ವನ್ಯಧಾಮದ ವ್ಯಾಪ್ತಿಗೆ ಬರುವ ಎಲ್ಲಾ ಕಚೇರಿಗಳಿಗೂ ಕೂಡ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ಕಾವೇರಿ ವನ್ಯಧಾಮದ ಕೌದಳ್ಳಿ ವಲಯಕ್ಕೆ ಸೇರಿದ ಅರಣ್ಯ ಜೀಪ್ಗೆ ಹಾನಿ ಮಾಡಿದ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಚಾಲಕ ಅರುಣ್ ಕುಮಾರ್ ದೂರು ಆಧರಿಸಿ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚೆಮುತ್ತು, ಮಾಳಶೆಟ್ಟಿ ಹಾಗೂ ಮತ್ತೋರ್ವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣವನ್ನ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಅಧಿಕೃತವಾಗಿ ಆದೇಶಿಸಲಾಗಿದೆ. 7 ದಿನದೊಳಗಾಗಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಇನ್ನೂ, ಶೂಟೌಟ್ ನಡೆದ ವೇಳೆ ಸತ್ತ ಮೂವರ ಜೊತೆ ತೆರಳಿದ್ದ ಮಹಿಮಾ ದಾಸ್ ಎಸ್ಕೇಪ್ ಆಗಿದ್ದ. ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸಚಿವ ಪುಟ್ಟರಂಗಶೆಟ್ಟಿ ಕೂಡ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು. ಆದರೀಗ ಏಕಾಏಕಿ ಮಹಿಮಾದಾಸ್ ನಾಪತ್ತೆಯಾಗಿದ್ದಾನೆ. ಇವರು ಕಾಡಿಗೆ ಹೋಗಿದ್ಯಾಕೆ? ಬೇಟೆಗೆ ಹೋಗಿದ್ದಾರಾ ಅಥವಾ ದನಗಾಹಿಗಳ ಎಂಬ ಅಸಲಿ ಸತ್ಯಾಸತ್ಯತೆಯನ್ನ ಆತನೇ ತಿಳಿಸಬೇಕಿದೆ. ಸದ್ಯ ಮಹಿಮಾದಾಸ್ ನಾಪತ್ತೆಯಾಗಿದ್ದು ಎಲ್ಲಿ ಹೋಗಿದ್ದಾನೆ ಎಂಬ ಸುಳಿವು ಕೂಡ ಸಿಕ್ಕಿಲ್ಲ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ಮುಕ್ತಾಯ.. ಮೃತದೇಹಗಳ ಹಸ್ತಾಂತರ
ಇತ್ತ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಮೂವರ ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಕ್ತಾಯಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೂರು ಆಂಬ್ಯುಲೆನ್ಸ್ಗಳಲ್ಲಿ ಸ್ವಗ್ರಾಮಕ್ಕೆ ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕ್ರಿಶ್ಚಿಯನ್ ಸಂಪ್ರದಾಯದಂತೆ ಇವತ್ತು ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಲಿದೆ.
Laxmi News 24×7