ಬಗೆದಷ್ಟು ಬಯಲಾಗ್ತಿದೆ ಕೆಪಿಎಸ್ಸಿ ಕರ್ಮಕಾಂಡ – ದಲ್ಲಾಳಿಗಳಿಗೆ ಸಾಥ್ ಕೊಡ್ತಿದ್ದ ಕೆ.ಪಿ.ಎಸ್ಸಿ ಉದ್ಯೋಗಿಗಳು ಅರೆಸ್ಟ್..!
ಕೆಲಸ ಕೊಡಿಸ್ತೀವಿ, ಫೈನಲ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರತ್ತೆ ಅಂತ ವಂಚಿಸ್ತಿದ್ದ ದಲ್ಲಾಳಿಗಳು. ದಲ್ಲಾಳಿಗಳಿಗೆ ಸಾಥ್ ನೀಡ್ತಿದ್ದ ಕೆಪಿಎಸ್ಸಿ ಸಿಬ್ಬಂದಿಗಳಾದ ಸೀನಿಯರ್ ಅಸಿಸ್ಟೆಂಟ್ ಸ್ವಾಮಿದಾಸ್, ಟೆಕ್ನಿಕಲ್ ಅಸಿಸ್ಟೆಂಟ್ ಶರಣಪ್ಪ, ಬಂಧಿತರು.
ಕೆಪಿಎಸ್ಸಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರ ಮೊಬೈಲ್ ನಂಬರ್ ಪಡಿತಿದ್ರು
ಪರೀಕ್ಷಾರ್ಥಿಗಳನ್ಮ ಸಂಪರ್ಕಿಸಲು ದಲ್ಲಾಳಿಗಳಿಗೆ ಮೊಬೈಲ್ ನಂಬರ್ ಕೊಡ್ತಿದ್ದ ಆರೋಪಿಗಳು.
ಇಂಟರ್ ವ್ಯೂ ನಲ್ಲಿ ಪಾಸ್ ಮಾಡಿಸ್ತೀವಿ, ನೇಮಕಾತಿ ಲಿಸ್ಟ್ ನಲ್ಲಿ ತಮ್ಮ ಹೆಸರು ಬರುವಂತೆ ನೋಡಿಕೊಳ್ತಿವಿ ಎನ್ನುತ್ತಿದ್ದ ದಲ್ಲಾಳಿಗಳು. ಕಳೆದ ಜನವರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗೆ ನಡೆದಿದ್ದ ಪರೀಕ್ಷೆ
ಅರ್ಹತಾ ಪಟ್ಟಿಯಲ್ಲಿ ಬಂದ ಅಭ್ಯರ್ಥಿಗಳನ್ನ ಸಂಪರ್ಕಿಸಿದ್ದ ದಲ್ಲಾಳಿಗಳು..
ದಲ್ಲಾಳಿಗಳು ಮಾತನಾಡಿದ್ದ ಆಡಿಯೋ ಸಮೇತ ಕೆಪಿಎಸ್ಸಿಗೆ ದೂರುನೀಡಿದ್ದ ಅಭ್ಯರ್ಥಿಗಳು
ಈ ಸಂಬಂಧ ಕಳೆದ ಫೆಬ್ರವರಿಯಲ್ಲಿ ವಿಧಾನಸೌಧ ಠಾಣೆಗೆ ದೂರು ನೀಡಿದ್ದ ಕೆಪಿಎಸ್ಸಿ ಕಾರ್ಯಾರ್ಶಿ. ದೂರಿನ ಸಂಬಂಧ ನಾಲ್ವರು ದಲ್ಲಾಳಿಗಳನ್ನ ಈ ಹಿಂದೆ ಬಂಧಿಸಿದ್ದ ವಿಧಾನಸೌಧ ಪೊಲೀಸರು. ಸದ್ಯ ಕೆಪಿಎಸ್ಸಿಯಲ್ಲಿ ಕರ್ತವ್ಯ ನಿರ್ವಹಿಸ್ತ ಅಕ್ರಮ ಎಸಗೋದ್ರಲ್ಲಿ ಭಾಗಿಯಾಗಿದ್ದ ಇಬ್ಬರು ಸಿಬ್ಬಂದಿ ಬಂಧನ.
Laxmi News 24×7