Breaking News

ಪಶ್ಚಿಮ ಘಟ್ಟದಲ್ಲಿ ವರುಣನ ಅಬ್ಬರ – ಬತ್ತಿಹೋಗಿದ್ದ ಭೀಮೆಯ ಒಡಲು ಒಂದೇ ದಿನದಲ್ಲಿ ಭರ್ತಿ

Spread the love

ಯಾದಗಿರಿ: ಮಹಾರಾಷ್ಟ್ರದ  ಪಶ್ಚಿಮ ಘಟ್ಟದಲ್ಲಿ  ವರುಣನ ಅಬ್ಬರ ಜೋರಾಗಿದ್ದು, ಬತ್ತಿಹೋಗಿದ್ದ ಭೀಮಾ ನದಿಯ  ಒಡಲು ಒಂದೇ ದಿನ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಗುರುಸಣಗಿ ಬ್ಯಾರೇಜ್‌ನಿಂದ 50 ಸಾವಿರ ಕ್ಯೂಸೆಕ್ ನೀರನ್ನು ಭೀಮಾನದಿಗೆ ಬಿಡುಗಡೆ ಮಾಡಲಾಗಿದೆ.

ಅಪಾರ ಪ್ರಮಾಣ ನೀರು ಹರಿದುಬರುತ್ತಿರುವ ಹಿನ್ನೆಲೆ ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪರಿಣಾಮ ನದಿ ತೀರದಲ್ಲಿರುವ ವೀರಾಂಜನೇಯ, ಕಂಗಳೇಶ್ವರ ದೇಗುಲಗಳಿಗೆ ಜಲದಿಗ್ಬಂಧನವಾಗಿದೆ. ದೇಗುಲಗಳ ಮುಳುಗಡೆ ಹಿನ್ನೆಲೆ ಭಕ್ತರಿಗೆ ದರ್ಶನ ಭಾಗ್ಯ ಮರಿಚಿಕೆಯಾಗಿದ್ದು, ನದಿ ತೀರದ ದೂರದಿಂದಲೇ ದರ್ಶನ ಪಡೆಯುತ್ತಿದ್ದಾರೆ.

ಇತ್ತ ಭೀಮಾನದಿಗೆ ಜೀವಕಳೆಯಿಂದ ಬೆಳೆ ಬೆಳೆಯಲು ಅನ್ನದಾತರಿಗೆ ವರದಾನ ಸಿಕ್ಕಿದಂತಾಗಿದೆ


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ