Breaking News

ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಲು ಟ್ರಸ್ಟ್ ಸ್ಥಾಪನೆ

Spread the love

ಬೆಳಗಾವಿ:ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲುವುದರ ಜತೆಗೆ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಸಮರ್ಥ ಸಂಘಟನೆಯಾಗಿ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಟ್ರಸ್ಟ್‌ನ್ನು ರೂಪಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣವೇ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿ ಹೀಗಾಗಿ ಆರ್ಥಿಕ ಸಮಸ್ಯೆದಿಂದ  ಯಾವ ವಿದ್ಯಾರ್ಥಿಯ ಶಿಕ್ಷಣವೂ ಮೊಟಕುಗೊಳ್ಳಬಾರದು. ಬ್ರಾಹ್ಮಣ ಸಮಾಜದ ಪ್ರತಿ ಕುಟುಂಬವೂ ಸದಸ್ಯತ್ವ ಪಡೆದು ಸಂಘಟನೆಯ ಕೈಬಲ ಹೆಚ್ಚಿಸಬೇಕು ಎಂದು ಮನವಿ ಮಾಡಿದರು,
ಸಮಾಜದಲ್ಲಿ ಪ್ರತಿಭೆ, ಸಂಪನ್ಮೂಲ ಮತ್ತು ಸೇವಾ ಮನೋಭಾವಕ್ಕೆ ಕೊರತೆಯಿಲ್ಲ. ಆದರೆ ಇವೆಲ್ಲವನ್ನೂ ಒಂದೇ ವೇದಿಕೆಯಡಿ ತರುವ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಸದಸ್ಯತ್ವ ಎನ್ನುವುದು ಕೇವಲ ಹೆಸರು ನೋಂದಾಯಿಸುವ ಪ್ರಕ್ರಿಯೆಯಲ್ಲ. ಅದು ಸಮಾಜದ ಅಭಿವೃದ್ಧಿಯ ಜವಾಬ್ದಾರಿಯಲ್ಲಿ ಪಾಲುದಾರರಾಗುವ ಸಂಕಲ್ಪವಾಗಿದೆ ಎಂದು ಪ್ರತಿಪಾದಿಸಿದರು.
  ಟ್ರಸ್ಟ್ ಉಪಾಧ್ಯಕ್ಷ ,ಉದ್ಯಮಿ ಭರತ ದೇಶಪಾಂಡೆ ಮಾತನಾಡಿ, ಬ್ರಾಹ್ಮಣ ಸಮಾಜದ ಅತ್ಯಂತ ದುರ್ಬಲ ಮತ್ತು ಸಂಕಷ್ಟದಲ್ಲಿರುವವರಿಗೂ ನೆರವಿನ ಹಸ್ತ ಚಾಚುವುದೇ ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ ಎಂದರು,
 ಕಾರ್ಯದರ್ಶಿ ವಿಲಾಸ ಬಾದಾಮಿ, ಜಂಟಿ ಕಾರ್ಯದರ್ಶಿ ವಿಲಾಸ ಜೋಶಿ,ದಿವಾಕರ ದೇಶಪಾಂಡೆ ,ಕೋಶಾಧ್ಯಕ್ಷ ರಮೇಶ ಕುಲಕರ್ಣಿ ಇತರರಿದ್ದರು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ