Breaking News

ಮಾಜಿ ಸಚಿವ ಹೆಚ್.ಎಂ ರೇವಣ್ಣ ಪತ್ನಿಯ ಸಹೋದರಿ ಕೊರೊನಾಗೆ ಬಲಿ..

Spread the love

ಬೆಂಗಳೂರು: ಕೋವಿಡ್ 19 ಎಂಬ ಚೀನಿ ವೈರಸ್ ಘಟಾನುಘಟಿ ನಾಯಕರಿಂದ ಹಿಡಿದು ಸಾಮಾನ್ಯ ಜನರನ್ನೂ ಬಿಡದೆ ಕಾಡುತ್ತಿದೆ. ಸದಾ ಜನರೊಂದಿಗಿರುವ ಜನಪ್ರತಿನಿಧಿಗಳಿಗೂ ಕೋವಿಡ್ 19 ಬಿಸಿ ತಟ್ಟಿದೆ. ಅಂತೆಯೇ ಇದೀಗ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರಿಗೂ ಮಹಾಮಾರಿಯ ಆತಂಕ ಶುರುವಾಗಿದೆ.

ಹೆಚ್.ಎಂ ರೇವಣ್ಣ ಅವರ ಪತ್ನಿ ಸಹೋದರಿ ಎಂ.ಎಸ್ ರೋಹಿಣಿ ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 61 ವರ್ಷ ವಯಸ್ಸಾಗಿರುವ ರೋಹಿಣಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೂಡಲೇ ಅವರನ್ನು ಸ್ವತಃ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ ಇದೀಗ ರೋಹಿಣಿ ಅವರು ಕೊರೊನಾಗೆ ಬಲಿಯಾಗಿದ್ದಾರೆ.

ಇತ್ತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ರೇವಣ್ಣ ಅವರಿಗೂ ಕೊರೊನಾ ಢವಢವ ಶುರುವಾಗಿದೆ. ರೋಹಿಣಿಯವರ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ